ರಾಷ್ಟ್ರೀಯ

ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಯಶಸ್ವಿ ಉಡಾವಣೆ

Pinterest LinkedIn Tumblr

ಶ್ರೀಹರಿಕೋಟಾ: ಶತ್ರು ರಾಷ್ಟ್ರಗಳ ನೆಲೆಗಳಲ್ಲಿರುವ ರೇಡಾರ್ ಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವಿರುವ ಎಮಿಸ್ಯಾಟ್ ಉಪಗ್ರಹ ಸೇರಿದಂತೆ 29 ನ್ಯಾನೋ ಉಪಗ್ರಹಗಳನ್ನು ಇಸ್ರೋ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗಿದೆ.

ಇಸ್ರೋದ ಪಿಎಸ್ ಎಲ್ ವಿ-ಸಿ45 ರಾಕೆಟ್ ಮೂಲಕ ಡಿಆರ್ ಡಿಒ ಅಭಿವೃದ್ಧಿ ಪಡಿಸಿದ ಎಮಿಸ್ಯಾಟ್, ಎಲೆಕ್ಟ್ರಾನಿಕ್ ಇಂಟೆಲಿಜೆನ್ಸ್ ಸೆಟಲೈಟ್ ಸೇರಿದಂತೆ ಅಮೆರಿಕದ 24, ಸ್ವಿರ್ಟ್ಜರ್ ಲೆಂಡ್ ನ 01, ಸ್ಪೇನ್ 1, ಲಿಥುಯೇನಿಯಾದ 02 ಹೊತ್ತೊಯ್ದಿದ್ದು, 3 ಕಕ್ಷೆಗಳಲ್ಲಿ ಈ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.

ಪಿಎಸ್​ಎಲ್​ವಿ 45 ಉಡಾಹಕ ನಿಗದಿಯಂತೆ 9.30ಕ್ಕೆ ಸರಿಯಾಗಿ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿತು, ಉಡಾಹಕವು ನಿಗದಿತ ಗಮ್ಯದತ್ತ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.

ಎಮಿಸ್ಯಾಟ್ ಉಪಗ್ರಹವನ್ನು ಡಿಆರ್ ಡಿಒ ಅಭಿವೃದ್ಧಿ ಪಡಿಸಿದೆ, ಮೊದಲ ಬಾರಿ ಮೂರು ವಿವಿಧ ಕಕ್ಷೆಗಳಲ್ಲಿ ರಾಕೆಟ್ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಇಸ್ರೋ ಅಧ್ಯಕ್ಷ ಕೆ,ಶಿವನ್ ಹೇಳಿದ್ದಾರೆ.

ಎಮಿಸ್ಯಾಟ್ ಉಪಗ್ರಹವನ್ನು ಇಂದು ಬೆಳಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಹೇಳಿದ್ದಾರೆ.

“ಬಾಹ್ಯಾಕಾಶ ವಿಜ್ಞಾನಿಗಳು ಮತ್ತು ಇಸ್ರೋ ಸಾಧನೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಪಿಎಸ್‌ಎಲ್‌ವಿ ಸಿ 45 ವಾಹಕದ ಮೂಲಕ ವಿವಿಧ ದೇಶಗಳ 20 ಕ್ಕೂಹೆಚ್ಚು ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು” ಎಂದರು. ಎಮಿಸ್ಯಾಟ್ ಯಶಸ್ವಿ ಉಡಾವಣೆಯನ್ನು ಐತಿಹಾಸಿಕ, ಮಹತ್ವದ ಮೈಲಿಗಲ್ಲು ಎಂದರು.

Comments are closed.