ರಾಷ್ಟ್ರೀಯ

ಎಸ್​​​ಪಿ-ಬಿಎಸ್​​​​ ಮೈತ್ರಿಗೆ ‘ಸರಾಬ್’​​​ ಎಂದು ಹೆಸರಿಟ್ಟ ಮೋದಿ

Pinterest LinkedIn Tumblr


ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ ಬೆನ್ನಲ್ಲೀಗ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ವಿರುದ್ಧ ಮಹಾಮೈತ್ರಿ ಕೂಗೂ ತುಸು ಹೆಚ್ಚಾಗಿಯೇ ಪ್ರತಿಧ್ವನಿಸುತ್ತಿದೆ. ಮುಂದಿನ ಬಾರಿಯೂ ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದಲ್ಲಿ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂದು ರಾಜಕೀತ ತಜ್ಞರು ಹೇಳುತ್ತಿದ್ದಾರೆ. ಆದರೆ, ಈ ಸಲ ಬಿಜೆಪಿಗೆ ಸೆಡ್ಡು ಹೊಡೆಯಲು ಬಹುಜನ ಸಮಾಜವಾದಿ ಪಕ್ಷ(ಬಿಎಸ್​​ಪಿ) ಹಾಗೂ ಸಮಾಜವಾದಿ ಪಕ್ಷ (ಎಸ್​​ಪಿ) ಮತ್ತು ಆರ್​​ಎಲ್​​​ಡಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಬಿಜೆಪಿಯನ್ನು ಶತಾಯಗತಾಯ ಸೋಲಿಸಿಯೇ ತೀರುತ್ತೇವೆಂದು ಪಣತೊಟ್ಟಿವೆ.

ಬಿಜೆಪಿಯನ್ನು ಮಣಿಸುವ ಕಾರಣದಿಂದಲೇ ಬಿಎಸ್‌ಪಿ, ಎಸ್‌ಪಿ ಮತ್ತು ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಅಂತಿಮ ಹಂತದ ಸಿದ್ಧತೆ ನಡೆಸಿಕೊಂಡಿವೆ. ಈಗಾಗಲೇ ಸೀಟು ಹಂಚಿಕೆ ಮಾಡಿಕೊಂಡಿರುವ ಈ ಮೈತ್ರಿಕೂಟ ಕಾಂಗ್ರೆಸ್​​ ಅನ್ನು ಹೊರಗಿಡುವ ನಿರ್ಧಾರ ತೆಗೆದುಕೊಂಡಿದೆ. ಇತ್ತೀಚೆಗೆ ಪಂಚರಾಜ್ಯ ಚುನಾವಣೆಗಳಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿದ ಕಾಂಗ್ರೆಸ್​​ ಕೂಡ ತನ್ನ ಅಸ್ತಿತ್ವಕ್ಕಾ ಏಕಾಂಗಿ ಹೋರಾಟಕ್ಕೆ ಮುಂದಾಗಿದೆ. ಈ ಮಧ್ಯೆ ಮತ್ತೆ ಅಧಿಕಾರ ಹಿಡಿಯಲು ಅವಣಿಸುತ್ತಿರುವ ಬಿಜೆಪಿ ರಾಷ್ಟ್ರೀಯ ನಾಯಕರ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕಣ್ಣು ಉತ್ತರಪ್ರದೇಶದ ಮೇಲೆ ನೆಟ್ಟಿದೆ.

ಈ ಮಧ್ಯೆ ಎಸ್​​ಪಿ-ಬಿಎಸ್​​ಪಿ ಮತ್ತು ಆರ್​​ಎಲ್​​​​​ಡಿ ನೇತೃತ್ವದ ಮೈತ್ರಿಕೂಟಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಭಿನ್ನ ಹೆರಿಟಿದ್ದಾರೆ. ಸಮಾಜವಾದಿ ಪಕ್ಷದಿಂದ ‘ಸ’ ಮತ್ತು ರಾಷ್ಟ್ರೀಯ ಲೋಕ ದಳ ಪಕ್ಷದಿಂದ ‘ರಾ’ ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ ‘ಬ’ ತೆಗೆದುಕೊಂಡು ಮೈತ್ರಿಕೂಟಕ್ಕೆ ‘ಸರಾಬ್​​’ ಎಂದು ಕರೆದಿದ್ದಾರೆ. ಉತ್ತರಪ್ರದೇಶದ ಜನರ ಆರೋಗ್ಯವಾಗಿರಬೇಕು ಎಂದಲ್ಲಿ ನೀವು ಈ ‘ಸರಾಬ್​​​’ ಪಕ್ಷಗಳಿಗೆ ಮತ ಹಾಕಬೇಡಿ. ಬಿಜೆಪಿಗೆ ಮತಹಾಕಿ ನಮ್ಮನ್ನು ಗೆಲ್ಲಿಸಿ ಎಂದು ಕರೆ ನೀಡಿದ್ದಾರೆ.

ಇನ್ನು ಮೋದಿಯವರ ಈ ಹೇಳಿಕಗೆ ಪ್ರತಿಕ್ರಿಯಿಸಿರುವ ಎಸ್​​ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್​​ ಯಾಧವ್​​ ಅವರು, ಟೆಲಿ ಪ್ರಾಂಪ್ಟರ್​​​​ ಕಾರಣಕ್ಕೆ ಪ್ರಧಾನಿಗೆ ಪಷಗಳ ಅರ್ಥ ಗೊತ್ತಾಗುತ್ತಿಲ್ಲ. ‘Saraba’ ಎಂದರೇ ಮರಿಚೀಕೆ. ಮೋದಿ ಐದು ವರ್ಷಗಳಲ್ಲಿ ಏನು ಮಾಡದೇ ಮರಿಚೀಕೆ ತೋರಿದ್ದರು. ಈಗ ಮತ್ತೊಂದು ಸುತ್ತು ಚುನಾವಣೆ ಎದುರಾಗುತ್ತಿದೆ. ಹೀಗಾಗಿ ಮೋದಿ ಮತ್ತೆ ಅದೇ ಮರಿಚೀಕೆ ತೋರಿಸಿಸುತ್ತಿದ್ಧಾರೆ ಎಂದು ತಿರುಗೇಟು ನೀಡಿದ್ದಾರೆ.

Comments are closed.