ರಾಷ್ಟ್ರೀಯ

ಬಿಹಾರದ ಬೇಗುಸಾರೈ ಕ್ಷೇತ್ರದಿಂದ ಕನ್ಹೈಯ ಕುಮಾರ್ ಸ್ಪರ್ಧೆ

Pinterest LinkedIn Tumblr

ಬಿಹಾರ: ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಮಾಜಿ ಅಧ್ಯಕ್ಷ ಕನ್ಹೈಯ ಕುಮಾರ್ ಬೇಗುಸಾರೈ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಬಿಹಾರದಲ್ಲಿ ಎಡಪಕ್ಷಗಳಿಗೆ ಮಹಾಮೈತ್ರಿ ಒಂದು ಸೀಟನ್ನು ಹಂಚಿಕೆ ಮಾಡಿದ ಬೆನ್ನಲ್ಲೇ, ಬೇಗುಸಾರೈ ಕ್ಷೇತ್ರದಿಂದ ಕನ್ಹೈಯ ಕುಮಾರ್ ಅವರನ್ನು ಚುನಾವಣಾ ಕಣಕ್ಕಿಳಿಸಲಾಗುವುದು ಎಂದು ಸಿಪಿಐ ಸ್ಪಷ್ಪಪಡಿಸಿದೆ.

ಬಿಹಾರದಲ್ಲಿ ಸಿಪಿಐ ಎಷ್ಟು ಸ್ಥಾನಗಳಲ್ಲಿ ರ್ಧಿಸಬೇಕೆಂಬ ಬಗ್ಗೆ ನಿರ್ಧರಿಸಲು ಇಂದು ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಆದರೆ, ಅಂತಿಮವಾಗಿ ಅಲ್ಲಿಂದ ಕನ್ಹೈಯ ಕುಮಾರ್ ಅವರನ್ನು ಕಣಕ್ಕಿಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಿಪಿಐ ಬಿಹಾರ ಕಾರ್ಯದರ್ಶಿ ಸತ್ಯನಾರಾಯಣ್ ಸಿಂಗ್ ಹೇಳಿದ್ದಾರೆ.

40 ಲೋಕಸಭಾ ಕ್ಷೇತ್ರವನ್ನು ಹೊಂದಿರುವ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾ ದಳ 20, ಕಾಂಗ್ರೆಸ್ 9, ಆರ್ ಎಲ್ ಎಸ್ 5 ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಟಾ ಮೂರು, ದಿ ವಿಕಾಶೀಲ್ ಇನ್ಸಾಪ್ ಫಾರ್ಟಿ ಮೂರು ಹಾಗೂ ಸಿಪಿಐ- ಎಂಎಲ್ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಲು ಶುಕ್ರವಾರ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು.

ಬೇಗುಸಾರೈ ಕ್ಷೇತ್ರದಲ್ಲಿ ಎನ್ ಡಿಎಯಿಂದ ಗಿರಿರಾಜ್ ಸಿಂಗ್, ಸಿಪಿಐನಿಂದ ಕನ್ಹೈಯ ಕುಮಾರ್ ಹಾಗೂ ಆರ್ ಜೆಡಿಯಿಂದ ತನ್ವೀರ್ ಹಾಸನ್ ಸ್ಪರ್ಧಿಸುತ್ತಿದ್ದು, ತ್ರಿಕೋನ ಹೋರಾಟ ಕಂಡುಬರುವ ಸಾಧ್ಯತೆ ಇದೆ.

Comments are closed.