ರಾಷ್ಟ್ರೀಯ

ನಟ ಶತೃಘ್ನ ಸಿನ್ಹಾಗಿಲ್ಲ ಈ ಬಾರಿ ಬಿಜೆಪಿ ಟಿಕೆಟ್; ಅವರ ಕ್ಷೇತ್ರ ಪಾಟ್ನಾ ಸಾಹಿಬ್ ನಿಂದ ರವಿಶಂಕರ್ ಪ್ರಸಾದ್ ಸ್ಪರ್ಧೆ!

Pinterest LinkedIn Tumblr

ನವದೆಹಲಿ: ನಿರೀಕ್ಷೆಯಂತೆಯೇ ಬಿಜೆಪಿ ಫೈರ್ ಬ್ರಾಂಡ್ ಖ್ಯಾತ ಹಿರಿಯ ಬಾಲಿವುಡ್ ನಟ ಶತೃಘ್ನ ಸಿನ್ಹಾ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ನಿರಾಕರಿಸಲಾಗಿದ್ದು, ಅವರು ಪ್ರತಿನಿಧಿಸುತ್ತಿದ್ದ ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ.

ಇಂದು ಬಿಜೆಪಿ ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಒಟ್ಟು 40 ಮುಖಂಡರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಈ ಹಿಂದೆ ಬಿಹಾರದ ಪಾಟ್ನಾ ಸಾಹಿಬ್ ಪ್ರತಿನಿಧಿಸುತ್ತಿದ್ದ ಬಿಜೆಪಿ ಫೈರ್ ಬ್ರಾಂಡ್ ಖ್ಯಾತ ಹಿರಿಯ ಬಾಲಿವುಡ್ ನಟ ಶತೃಘ್ನ ಸಿನ್ಹಾ ಅವರಿಗೆ ಈ ಬಾರಿ ಲೋಕಸಭೆ ಟಿಕೆಟ್ ನಿರಾಕರಿಸಲಾಗಿದ್ದು, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಲಾಗಿದೆ.

ಉಳಿದಂತೆ ಗಿರಿರಾಜ್ ಸಿಂಗ್ ಅವರು ಬೇಗುಸರಾಯ್ ನಿಂದ ಸ್ಪರ್ಧೆ ಮಾಡುತ್ತಿದ್ದು, ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಒಡಿಶಾದ ಪುರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಬಿಜೆಪಿ ಮೈತ್ರಿ ಪಕ್ಷ ಲೋಕಜನಶಕ್ತಿ ಪಕ್ಷದ ಮುಖಂಡ ಚಿರಾಗ್ ಪಾಸ್ವಾನ್ ಜಮುಲ್ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದು, ರಾಮ್ ಕಿರ್ಪಾಲ್ ಯಾದವ್ ಅವರು ಪಾಟಲಿಪುತ್ರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.

ಅರಾಹ್ ದಿಂದ ಆರ್ ಕೆ ಸಿಂಗ್, ಬಕ್ಸಾರ್ ನಿಂದ ಅಶ್ವಿನ್ ಚೌಬೆ, ಈಸ್ಟ್ ಚಂಪಾರಣ್ ಕ್ಷೇತ್ರದಿಂದ ರಾಧಾ ಮೋಹನ್ ಸಿಂಗ್, ಸರಣ್ ಕ್ಷೇತ್ರ ರಾಜೀವ್ ಪ್ರತಾಪ್ ರೂಡಿ ಸ್ಪರ್ಧೆ ಮಾಡುತ್ತಿದ್ದಾರೆ.

Comments are closed.