ರಾಷ್ಟ್ರೀಯ

ಈ ಬಾರಿಯ ಚುನಾವಣೆಯಲ್ಲಿಯೂ ಮೋದಿ ಬ್ರಾಂಡ್ ಮುಂದಿಟ್ಟುಕೊಂಡು ಮತಯಾಚಿಸಲು ಮುಂದಾಗಿರುವ ರಾಜ್ಯ ಬಿಜೆಪಿ !

Pinterest LinkedIn Tumblr

ಬೆಂಗಳೂರು: 2014 ರ ಲೋಕಸಭೆ ಚುನಾವಣೆ ನಂತರ ಮತ್ತೆ ಅಂದರೆ 2019ರಲ್ಲಿಯೂ ಮೋದಿ ಬ್ರಾಂಡ್ ಮುಂದಿಟ್ಟುಕೊಂಡು ಮತಯಾಚಿಸಲು ರಾಜ್ಯ ಬಿಜೆಪಿ ಸಿದ್ಧವಾಗಿದೆ.

ಚುನಾವಣೆ ತಂತ್ರದಲ್ಲಿ ಇದು ಒಂದು ಪ್ಲಸ್ ಪಾಯಿಂಟ್ ಆಗಿದೆ, ಆದರೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಇದೊಂದು ಆಯುಧವಾಗಿದೆ, ಜಿಲ್ಲಾ ಘಟಕಗಳ ನಡುವಿನ ಭಿನ್ನಾಭಿಪ್ರಾಯ, ಆಡಳಿತ ವಿರೋಧಿ ಅಲೆ, ಕೆಲವು ಸಂಸದರ ವಿರುದ್ಧ ಅಸಹನೆ ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗಾಗಿ ನಮಡೆಯುತ್ತಿರುವ ಚುನಾವಣೆ, ಬೇರೆನೂ ಇಲ್ಲಿ ಪ್ರಾಮುಖ್ಯತೆಯಿಲ್ಲ, ಹೀಗಾಗಿ ಪಕ್ಷ ಕೂಡ ನರೇಂದ್ರ ಮೋದಿ ಅವರನ್ನು ಮುಂದಿಟ್ಟುಕೊಂಡು ಚುನಾವಣಾ ತಂತ್ರ ನಡೆಸುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ಮೋದಿ ಫ್ಯಾಕ್ಟರ್ ಕೆಲಸ ಮಾಡುತ್ತಿದೆ. ಮೋದಿ ಮಾತ್ರವೇ ಮುಖ್ಯ, 2014 ರ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಪಕ್ಕಕ್ಕಿಟ್ಟು, ಮೋದಿಯನ್ನು ಗಮನದಲ್ಲಿರಿಸಿಕೊಂಡು ಮತ ಹಾಕಿದ್ದರು ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಹಿಂದುಳಿಗ ವರ್ಗಗಳ ಮತಗಳನ್ನು ಕೇಂದ್ರೀಕರಿಸುತ್ತಿರುವುದು ಬಿಜೆಪಿಗೆ ದೊಡ್ಡಸವಾಲಾಗಿದೆ. ಜೊತೆಗೆ ಕಾಂಗ್ರಸ್ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳನ್ನು ಒಡೆಯಲು ಯತ್ನಿಸಿದೆ.

ಜಾತಿ ಲೆಕ್ಕಾಚಾರ, ಕೌಟುಂಬಿಕ ರಾಜಕೀಯ ಸೇರಿದಂತೆ ಈ ಎಲ್ಲಾ ಸದ್ಯದ ಚುನಾವಣೆ ವಿಷಯವಾಗಿದೆ.ಆದರೆ ಮೋದಿ ಅಲೆ ಪ್ರಬಲವಾಗಿದ್ದು, ನಾವು ಹೆಚ್ಚಿನ ಸೀಟುಗಳನ್ನು ಗೆಲ್ಲುತ್ತೇವೆ ಎಂದು ಎಂದು ಹಿರಿಯ ಬಿಜೆಪಿ ನಾಯಕ ಸಿ,.ಟಿ ರವಿ ಹೇಳಿದ್ದಾರೆ.

ಲಿಂಗಾಯತ ಮತಗಳನ್ನು ಹೊರತು ಪಡಿಸಿದರೇ ಬಿಜೆಪಿ ನಾಯಕರುಗಳ ಬೇಜಾವಬ್ದಾರಿಯತ ಹೇಳಿಕೆಗಳು ದೊಡ್ಡ ಸವಾಲಾಗಿದೆ ಎಂದು ರಾಜಕೀಯ ತಜ್ಞ ಹರೀಶ್ ರಾಮಸ್ವಾಮಿ ಹೇಳಿದ್ದಾರೆ.

Comments are closed.