ರಾಷ್ಟ್ರೀಯ

ಮೂವರು ಉಗ್ರಗಾಮಿಗಳನ್ನು ಬೆದರಿಸಿ, ಓಡಿಸಿದ ಬಾಲಕನಿಗೆ ಶೌರ್ಯ ಚಕ್ರ

Pinterest LinkedIn Tumblr


ಹೊಸದಿಲ್ಲಿ: ಪ್ರಾಣಾಪಾಯವನ್ನು ಲೆಕ್ಕಿಸದೆ ಉಗ್ರರ ವಿರುದ್ಧ ಹೋರಾಡಿದ್ದ ಜಮ್ಮು ಮತ್ತು ಕಾಶ್ಮೀರದ ಹದಿ ಹರೆಯದ ಹುಡುಗ ಇರ್ಫಾನ್ ರಮ್ಜಾನ್ ಶೇಖ್‌ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶೌರ್ಯ ಚಕ್ರ ನೀಡಿ ಗೌರವಿಸಿದರು.

16 ಅಕ್ಟೋಬರ್ 2017ರಲ್ಲಿ ಶಸ್ತ್ರಾಸ್ತ್ರಧಾರಿ ಮೂವರು ಉಗ್ರರು ಇರ್ಫಾನ್ ಮನೆಗೆ ನುಗ್ಗಿದ್ದರು. ಅವರು ಆತನ ತಂದೆ ರಮ್ಜಾನ್ ಶೇಖ್ ಅವರನ್ನು ಕೊಲ್ಲಲು ಬಯಸಿದ್ದರು. ಆದರೆ ವೀರ ಬಾಲಕ ಉಗ್ರರಿಗೆ ತನ್ನ ಮನೆ ಒಳಗೆ ಪ್ರವೇಶಿಸಲು ಹಿಡಲಿಲ್ಲ. ಆಗ ಆತನಿಗೆ ಕೇವಲ 14 ವರ್ಷ ವಯಸ್ಸು.

ಅಪಾಯಕಾರಿ ಸನ್ನಿವೇಶದಲ್ಲಿ ಎದೆಗುಂದದ ಇರ್ಫಾನ್ ಹೋರಾಟ ನಿಜವಾದ ಯೋಧನಂತಿತ್ತು. ಘಟನೆಯಲ್ಲಿ ಒಬ್ಬ ಉಗ್ರ ಗುಂಡೇಟಿನಿಂದ ಸಾವನ್ನಪ್ಪಿದ. ಬಾಲಕನ ತಂದೆ ಗಂಭೀರವಾಗಿ ಗಾಯಗೊಂಡಿದ್ದರು.

ಹುಡುಗನಿಗೆ ಬೆದರಿದ ಉಗ್ರರು ತಮ್ಮ ಸಹಚರನ ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದರು.

ಮೂವರು ಉಗ್ರರನ್ನು ಒಬ್ಬ ಬಾಲಕ ಎದುರಿಸುತ್ತಾನೆಂದರೆ, ಆತನಿಗೆ ಎಷ್ಟು ಧೈರ್ಯವಿರಲಿಕ್ಕೆ ಸಾಕು. ಅವರನ್ನು ಬೆದರಿಸಿ ಪಲಾಯನ ಮಾಡುವಂತೆ ಮಾಡಿದ್ದು ಮತ್ತಷ್ಟು ಪ್ರಶಂಸನೀಯ ಸಂಗತಿ. ಈ ಪುಟ್ಟ ಬಾಲಕನ ಧೈರ್ಯವನ್ನು ದೇಶವೇ ಕೊಂಡಾಡಿತ್ತು.

Comments are closed.