ರಾಷ್ಟ್ರೀಯ

‘ನಾನು ಪೊಲೀಸ್ ಕಮಿಷನರ್ ಮಗ’ ಎಂದಿದ್ದವನಿಗೆ ಪರಿಕ್ಕರ್ ನೀಡಿದ್ದ ಉತ್ತರ!

Pinterest LinkedIn Tumblr


ಪಣಜಿ: ಮಾಜಿ ಕೇಂದ್ರ ಸಚಿವ ಹಾಗೂ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರು ತಮ್ಮ ಸರಳತೆಯ ಮೂಲಕವೇ ಹೆಸರಾಗಿದ್ದವರು. ಅವರು ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಈ ವೇಳೆ ಐಶಾರಾಮಿ ಕಾರಿನಲ್ಲಿ ಬಂದಿದ್ದ ಓರ್ವ ಯುವಕ ಅವರ ಸ್ಕೂಟಿಗೆ ಗುದ್ದಿ ತಾನು ಗೋವಾ ಪೊಲೀಸ್ ಕಮಿಷನರ್ ಮಗ ಎಂದು ಧಿಮಾಕಿನಿಂದ ಹೇಳಿದ್ದ..
ಹೌದು.. ಹಿಂದೊಮ್ಮೆ ಪರಿಕ್ಕರ್ ಗೋವಾ ಸಿಎಂ ಆಗಿದ್ದಾಗ ಸ್ಕೂಟಿಯಲ್ಲಿ ತೆರಳಿದ್ದ ಮನೋಹರ್ ಪರಿಕ್ಕರ್ ಅವರು ಸಣ್ಣ ಅಪಘಾತಕ್ಕೀಡಾಗಿದ್ದರು. ಈ ವೇಳೆ ಪರಿಕ್ಕರ್ ಸ್ಕೂಟಿಗೆ ಗುದ್ದಿದ ಐಶಾರಾಮಿ ಕಾರಿನಲ್ಲಿದ್ದ ಯುವಕ ಕೂಡಲೇ ಕೆಳಗೆ ಇಳಿದು ಬಂದುದ ಪರಿಕ್ಕರ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದ. ಈ ವೇಳೆ ಧಿಮಾಕಿನಿಂದ ತಾನು ಯಾರು ಎಂದು ನಿನಗೆ ಗೊತ್ತೇ.. ನಾನು ಗೋವಾ ಪೊಲೀಸ್ ಕಮಿಷನರ್ ಅವರ ಮಗ ಎಂದು ಧಿಮಾಕಿನಿಂದ ಹೇಳಿದ್ದ.
ಈ ವೇಳೆ ಯುವಕನ ಧಿಮಾಕಿಗೆ ಅಷ್ಟೇ ಸರಳವಾಗಿ ಉತ್ತರಿಸಿದ್ದ ಪರಿಕ್ಕರ್ ಅವರು, ನಾನು ಯಾರು ಗೊತ್ತಾ.. ಗೋವಾ ಸಿಎಂ ಎಂದು ಸಣ್ಣ ಧನಿಯಲ್ಲಿ ಹೇಳಿದ್ದರು. ಈ ವೇಳೆ ಧಿಮಾಕು ತೋರಿದ್ದ ಯುವಕ ಪತರುಗುಟ್ಟು ಹೋಗಿದ್ದ.
ಇಷ್ಟೇ ಅಲ್ಲ ಪರಿಕ್ಕರ್ ಅವರ ಜೀವನದಲ್ಲಿ ಇಂತಹ ಅದೆಷ್ಟೋ ಘಟನೆಗಳು ಘಟಿಸಿವೆ. ಪರಿಕ್ಕರ್ ಅವರಿಗೆ ಸ್ಕೂಟಿ ಚಲಾಯಿಸುವುದು ಎಂದರೆ ಬಹಳ ಇಷ್ಟವಂತೆ. ಆದರೆ ಇಂತಹ ಸ್ಕೂಟಿ ಚಲಾಯಿಸುವುದನ್ನೇ ಅವರು ತೊರೆದಿದ್ದರು. ಕಾರಣ ಅವರ ಕೆಲಸ…
ಹೌದು.. ಈ ಹಿಂದೆ ಕನಕೋನದಲ್ಲಿ ನಡೆದ ಕಾರ್ಯಾಕ್ರಮವೊಂದರಲ್ಲಿ ಮಾತನಾಡಿದ್ದ ಅವರು, ನಾನು ಸ್ಕೂಟಿ ಡ್ರೈವಿಂಗ್ ಬಿಟ್ಟಿದ್ದೇನೆ. ನನ್ನ ತಲೆತುಂಬ ನಾನು ಮಾಡಬೇಕಾದ ಕೆಲಸಗಳೇ ತುಂಬಿರುತ್ತವೆ. ನಾನು ಗಾಡಿ ಚಲಾಯಿಸುವಾಗಲೂ ಆ ಕೆಲಸಗಳ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಹೀಗಾಗಿ ನನ್ನ ಕೆಲಸದ ಮೇಲಿನ ಗಮನದಿಂದ ನಾನು ಗಾಡಿ ಚಲಾಯಿಸಿ ನನಗೂ ಮತ್ತೊಬ್ಬರಿಗೂ ಹಾನಿ ಮಾಡುವುದು ಇಷ್ಟವಿಲ್ಲ. ಹೀಗಾಗಿ ಬೈಕ್ ಚಲಾಯಿಸುವುದನ್ನು ಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು.

Comments are closed.