ರಾಷ್ಟ್ರೀಯ

ಟ್ವಿಟರ್ ಖಾತೆಯಲ್ಲಿ ‘ಚೌಕಿದಾರ್’ ನರೇಂದ್ರ ಮೋದಿ-ಅಮಿತ್ ಶಾ; ಹೆಸರು ಬದಲಾಯಿಸಿಕೊಂಡ ಬಿಜೆಪಿ ನಾಯಕರು

Pinterest LinkedIn Tumblr

ಸಾಮಾಜಿಕ ಜಾಲತಾಣಗಳಲ್ಲಿ ‘ ಮೈನ್ ಬಿ ಚೌಕಿದಾರ್ ‘ ಪ್ರಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ನರೇಂದ್ರ ಮೋದಿ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೂಡಾ ನರೇಂದ್ರ ಮೋದಿ ಅವರಂತಯೇ ಚೌರಿದಾರ್ ಅಮಿತ್ ಶಾ ಎಂದು ಹೆಸರು ಮರು ನಾಮಕರಣ ಮಾಡಿಕೊಂಡಿದ್ದಾರೆ.

ಕೇಂದ್ರ ಸಚಿವರಾದ ಪಿಯೂಷ್ ಗೋಯೆಲ್, ಜೆಪಿ ನಡ್ಡಾ, ಹರ್ಷ ವರ್ಧನ್, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಮತ್ತಿತರ ಮುಖಂಡರು ತಮ್ಮ ಹೆಸರಿನ ಮುಂದೆ ಚೌಕಿದಾರ್ ಎಂದು ಸೇರ್ಪಡೆ ಮಾಡಿಕೊಂಡಿದ್ದಾರೆ.ಶುದ್ಧತೆಯಿಂದ ನೈತಿಕ ಮೌಲ್ಯವನ್ನು ಕಾಪಾಡುವವನು ಚೌಕಿದಾರ್ ಆಗಿರುತ್ತಾರೆ. ಮತ್ತೆ ಚೌಕಿದಾರ್ ಎಲ್ಲರೂ ಹೃದಯ ತುಂಬಿ ಹೇಳಿ ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೇನ್ ಬಿ ಚೌಕಿದಾರ್ ಪ್ರಚಾರಕ್ಕೆ ಮೋದಿ ಚಾಲನೆ ನೀಡಿದ ಮಾರನೇ ದಿನವೇ ಈ ಬೆಳವಣಿಗೆ ನಡೆದಿದೆ. ಪ್ರಧಾನಿ ಮೋದಿ ಕೂಡಾ ಟ್ವೀಟರ್ ನಲ್ಲಿ ಇದೇ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Comments are closed.