ರಾಷ್ಟ್ರೀಯ

ಜಮ್ಮು-ಕಾಶ್ಮೀರ: ವಿಧಾನಸಭೆ ಚುನಾವಣೆ ಕುರಿತು ಆಯೋಗ ಮರುಚರ್ಚೆ!

Pinterest LinkedIn Tumblr


ನವದೆಹಲಿ: ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತು ಪಾಕ್​​​ ನಡುವಿನ ಅಂತರಾಷ್ಟ್ರೀಯ ಗಡಿ ಸುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿಯೇ ಜಮ್ಮು-ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಚುನಾವಣೆ ಆಯೋಗ ಹಿಂದೇಟಾಕುತ್ತಿದೆ. ಚುನಾವಣೆ ಆಯೋಗದ ಈ ನಿರ್ಧಾರಕ್ಕೆ ಬರುವ ಮುನ್ನವೇ ಅಲ್ಲಿನ ಸ್ಥಳೀಯ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸುತ್ತಿವೆ.

ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ಏಕಾಕಲದಲ್ಲಿಯೇ ನಡೆಸಲು ಆಯೋಗ ಹಿಂದೇಟಾಕುತ್ತಿದೆ. ಇದಕ್ಕೆ ಸ್ಥಳೀಯ ಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸಭೆ ಚುನಾವಣೆ ನಡೆಸಲೇಬೇಕೆಂದು ಆಗ್ರಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆಗಳ ಸುತ್ತ ಮರುಚರ್ಚೆ ನಡೆಸಲು ಆಯೋಗ ಮುಂದಾಗಿದೆ.

ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮಾತುಕತೆ ಬಳಿಕ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.

ಜಮ್ಮ-ಕಾಶ್ಮೀರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗಿತ್ತು. ಆಯೋಗವೇ ಏಪ್ರಿಲ್ 11, 18 ಮತ್ತು 23ಕ್ಕೆ ಮೂರು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ದಿನಾಂಕ ಪ್ರಕಟಿಸಿತ್ತು.

ಅನಂತನಾಗ್, ಬಾರಾಮುಲ್ಲಾ, ಜಮ್ಮು, ಲಡಾಖ್, ಶ್ರೀನಗರ, ಉಧಮ್ ಪುರ ಎಂಬ 6 ಲೋಕಸಭಾ ಕ್ಷೇತ್ರಗಳಿದ್ದು, ಇಲ್ಲಿ ಭಯೋತ್ಪಾದಕ ಕೃತ್ಯಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿವೆ. ದೇಶದ ಎಲ್ಲಾ ರಾಜ್ಯ ಚುನಾವಣೆಗೆ ನೀಡುವ ಭದ್ರತೆಯಂತಲ್ಲದೇ, ವಿಶೇಷ ಬಂದೋಬಸ್ತ್​​​ ಮಾಡಬೇಕಿದೆ. ಹೀಗಾಗಿ ಸದ್ಯ ವಿಧಾನಸಭೆ ಚುನಾವಣೆ ಬೇಡ ಎಂದು ಆಯೋಗ ಹಿಂದೇಟಾಕಿತ್ತು.

Comments are closed.