ರಾಷ್ಟ್ರೀಯ

ಭಾರತೀಯ ರಕ್ತ ಹೊಂದಿರುವವರು ಯಾರೂ ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯನ್ನು ಅನುಮಾನಿಸುವುದಿಲ್ಲ: ಮೋದಿ

Pinterest LinkedIn Tumblr

ನವದೆಹಲಿ: ಭಾರತೀಯ ರಕ್ತ ಹೊಂದಿರುವವರು ಯಾರೂ ಪಾಕಿಸ್ತಾನದ ಬಾಲಕೋಟ್ ನ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಕ್ಯಾಂಪ್ ಮೇಲೆ ನಡೆದ ವೈಮಾನಿಕ ದಾಳಿಯ ಬಗ್ಗೆ ಅನುಮಾನ ವ್ಯಕ್ತಪಡಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.

ಇಂದು ನೊಯ್ಡಾದಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ಉಗ್ರರನ್ನು ಮಟ್ಟಹಾಕಲು ಭಾರತ ನಮ್ಮ ಅವಧಿಯಲ್ಲಿ ಹೊಸ ನೀತಿ ಅನುಸರಿಸುತ್ತಿದೆ. ಈ ಹಿಂದೆ ಮುಂಬೈ ದಾಳಿಯಾದಗಾಲೂ ಯುಪಿಎ ಸರ್ಕಾರ ಇದೇ ರೀತಿ ಪ್ರತಿಕ್ರಿಯೆ ನೀಡಬೇಕಾಗಿತ್ತು ಎಂದರು.

ಮುಂಬೈ ದಾಳಿಯ ನಂತರ ನಮ್ಮ ಸೇನಾಪಡೆಗಳು ಉಗ್ರರ ವಿರುದ್ಧ ಪ್ರತೀಕಾರಕ್ಕೆ ಸಿದ್ಧವಾಗಿದ್ದವು. ಆದರೆ ಹಿಂದಿನ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಹೀಗಾಗಿ ಸೇನಾಪಡೆಗಳು ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದರು.

2016ರಲ್ಲಿ ಉರಿ ಉಗ್ರ ದಾಳಿಯ ನಂತರ ನಾವು ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಮೂಲಕ ಉಗ್ರರಿಗೆ ಪಾಠ ಕಲಿಸಿದೆವು. ಭಾರತ ಈಗ ಹೊಸ ರೀತಿ ಮತ್ತು ನೀತಿಯೊಂದಿಗೆ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

Comments are closed.