ರಾಷ್ಟ್ರೀಯ

ರಫೇಲ್​ ದಾಖಲೆ ಕಳುವು; ಮೋದಿ ವಿರುದ್ಧ ದೂರು ದಾಖಲಿಸಲು ರಾಹುಲ್​ ಗಾಂಧಿ ಆಗ್ರಹ

Pinterest LinkedIn Tumblr

ನವದೆಹಲಿ: ರಫೇಲ್ ಯುದ್ಧ ವಿಮಾನ ಒಪ್ಪಂದದ ಎಲ್ಲದಾಖಲೆಗಳು ನಾಪತ್ತೆಯಾಗಿದೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಇದರಲ್ಲಿ ನರೇಂದ್ರ ಮೋದಿ ಹೆಸರಿದ್ದು, ಈ ಪ್ರಕರಣದ ತನಿಖೆಗೆ ಮುಂದಾಗಬೇಕು. ಮೋದಿ ವಿರುದ್ಧ ದೂರು ದಾಖಲಿಸಬೇಕು ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಆಗ್ರಹಿಸಿದ್ದಾರೆ

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಫೇಲ್​ ಯುದ್ಧ ವಿಮಾನ ಖರೀದಿ ಅವ್ಯವಹಾರದಲ್ಲಿ ಮೋದಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಅನೇಕ ಸಾಕ್ಷಿಗಳಿವೆ. ಅವರನ್ನು ನಾವು ತನಿಖೆಗೆ ಒಳಪಡಿಸಬಹುದು.

ರಫೇಲ್​ ವ್ಯವಹಾರದಲ್ಲಿ ತನಿಖೆ ನಡೆಸದಂತೆ ಮಾಧ್ಯಮಗಳಿಗೆ ಎಚ್ಚರಿಸಲಾಗಿದೆ, ಮೋದಿಯನ್ನು ಉಳಿಸಲು ಸರ್ಕಾರ ವ್ಯವಸ್ಥಿತವಾಗಿ ನಿಯಂತ್ರಿಸುತ್ತಿದ್ದು ಹಗರಣದಲ್ಲಿ ತೊಡಗಿರುವವರ ವಿರುದ್ಧ ಯಾವುದೇ ತನಿಖೆಗಳು ನಡೆಸಲು ಬಿಡುವುದಿಲ್ಲ.

ಯುವಜನರಿಗೆ 2 ಕೋಟಿ ಉದ್ಯೋಗ ನೀಡುವ ಭರವಸೆ ಹಾಗೂ ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಭರವಸೆ ನೀಡಿ ಮಾತಿಗೆ ತಪ್ಪಿದಂತೆ ರಫೇಲ್​ ದಾಖಲೆಗಳು ಕೂಡ ಕಣ್ಮರೆಯಾಗಿದೆ.

ರಫೇಲ್​ ಯುದ್ಧ ವಿಮಾನ ದಾಖಲೆ ಕಳುವಾಗಿರುವ ಕುರಿತು ನಿನ್ನೆ ಸುಪ್ರೀಂ ಕೋರ್ಟ್​ ಪೀಠಕ್ಕೆ ಅಟಾರ್ನಿ ಜನರಲ್​ ಕೆಕೆ ವೇಣುಗೋಪಾಲ್​ ತಿಳಿಸಿದ್ದರು. ಅಲ್ಲದೇ ದಾಖಲೆಗಳು ಕಳುವಾಗಿದ್ದರು ಈ ಕುರಿತು ಲೇಖನ ಪ್ರಕಟಿಸಿದ್ದ ದ ಹಿಂದೂ ಪತ್ರಿಕೆ ವಿರುದ್ಧ ಕೂಡ ಪ್ರಕರಣ ದಾಖಲಿಸುವುದಾಗಿ ಸರ್ಕಾರ ಎಚ್ಚರಿಕೆ ನೀಡಿತು.

ದಾಖಲೆಗಳು ಕಳುವಾಗಿದೆ ಎಂದರೆ, ಆ ಮಾಹಿತಿಗಳು ನಿಖರವಾಗಿದ್ದವು. ಇದರಲ್ಲಿ ಮೋದಿ ಹಸ್ತಕ್ಷೇಪ ಮಾಡಿರುವುದು ನಿಜವಾಗಿದೆ. ದಾಖಲೆ ಕಳುವಾಗಿದೆ ಎಂದ ಮೇಲೆ ಕಾನೂನಾತ್ಮಕವಾಗಿ ಸರ್ಕಾರ ಏನು ಮಾಡಬೇಕೊ ಮಾಡಲಿ. ಯಾಕೆ ಅವರು ಇನ್ನು ತನಿಖೆಗೆ ಮುಂದಾಗುತ್ತಿಲ್ಲ. ದಾಖಲೆಯಲ್ಲಿ ಪ್ರಧಾನಿ ಹೆಸರು ಸ್ಪಷ್ಟವಾಗಿ ಉಲ್ಲೇಖಿಸಿರುವಾಗ ಯಾಕೆ ಅಪರಾಧ ತನಿಖೆಗೆ ಮುಂದಾಗಬಾರದು ಎಂದು ಪ್ರಶ್ನಿಸಿದರು.

ರಫೇಲ್​ ಮಾಹಿತಿ ಕಳುವಾಗಿದೆ. ಮಾಧ್ಯಮಗಳಿಂದಲೇ ರಫೇಲ್​ ದಾಖಲೆ ಕಳುವಾಗಿದ್ದು, ನಿಮ್ಮ ಮೇಲೆ ತನಿಖೆಗೆ ಮುಂದಾಗಬೇಕು ಎನ್ನುತ್ತಾರೆ. ಆದರೆ 30 ಕೋಟಿ ಹಗರಣದಲ್ಲಿ ದಾಖಲಾದವರ ಮೇಲೆ ತನಿಖೆ ಬೇಡವೇ ಎಂದರು.

ಲೋಕಸಭಾ ಚುನಾವಣೆಗೆ ಎಎಪಿ ಜೊತೆಗೆ ಯಾವುದೇ ಮೈತ್ರಿ ಇಲ್ಲ. ಮೈತ್ರಿ ಬೇಡ ಎಂಬ ಬಗ್ಗೆ ಪಕ್ಷ ಒಮ್ಮತವಾಗಿ ನಿರ್ಧರಿಸಿದೆ.

Comments are closed.