ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನ್‌ ಖಾತೆ ಹೊಂದಿಲ್ಲ

Pinterest LinkedIn Tumblr


ಹೊಸದಿಲ್ಲಿ: ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಯಾವ ಸಾಮಾಜಿಕ ಮಾಧ್ಯಮದಲ್ಲಿಯೂ ಖಾತೆ ಹೊಂದಿಲ್ಲ ಎಂದು ವಾಯುಪಡೆ ಬುಧವಾರ ಸ್ಪಷ್ಟಪಡಿಸಿದೆ.

ಕೆಲವರು ಅಭಿನಂದನ್‌ ಹೆಸರಿನ ಖಾತೆಯಿಂದ ಸುಳ್ಳುಸುದ್ದಿಗಳನ್ನು ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ.

ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರು ಯಾವುದೇ ಸಾಮಾಜಿಕ ಮಾಧ್ಯಮದಲ್ಲಿಯೂ (ಫೇಸ್‌ಬುಕ್‌/ಟ್ವಿಟರ್‌/ಇನ್ಸ್‌ಟಾಗ್ರಾಮ್‌) ಖಾತೆ ಹೊಂದಿಲ್ಲ. ದಯವಿಟ್ಟು ವಾಯುಪಡೆಯ ಯೋಧರ ಹೆಸರಿನ ನಕಲಿ ಖಾತೆಯಿಂದ ಹರಡುತ್ತಿರುವ ತಪ್ಪುಮಾಹಿತಿಗಳನ್ನು ನಂಬಬೇಡಿ ಎಂದು ವಾಯುಪಡೆ ಮನವಿ ಮಾಡಿದೆ.

ಸ್ಮೃತಿ ಟ್ವೀಟ್‌ ವೈರಲ್‌: ಪಾಕಿಸ್ತಾನ ವಶದಲ್ಲಿದ್ದಾಗ ಅಭಿನಂದನ್‌ ನೀಡಿದ ಉತ್ತರ ನೆನಪಿಸಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಟ್ವಿಟರ್‌ನಲ್ಲಿ ಬುಧವಾರ ಹಂಚಿಕೊಂಡ ಚಿತ್ರವೊಂದು ವೈರಲ್‌ ಆಗಿದೆ. ಸ್ಮೃತಿ ಪೋಸ್ಟ್‌ ಮಾಡಿದ ಚಿತ್ರದಲ್ಲಿ, ಅಭಿನಂದನ್‌ ಮತ್ತು ಪಾಕಿಸ್ತಾನ ಎಂಬ ಇಬ್ಬರು ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುತ್ತಾರೆ.

ಪಾಕಿಸ್ತಾನ ಉತ್ತರ ಕೇಳಿದಾಗ ಅಭಿನಂದನ್‌ ಚೀಟಿಯೊಂದನ್ನು ನೀಡುತ್ತಾರೆ. ಅದರಲ್ಲಿ, ”ನಾನು ನಿಮಗೆ ಇದನ್ನು ಹೇಳುವಂತಿಲ್ಲ,” ಎಂದು ಬರೆದಿರುತ್ತದೆ! ಅಭಿನಂದನ್‌ ಅವರಿಗೆ ಪಾಕಿಸ್ತಾನ ಸೇನೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ, ”ನಾನು ನಿಮಗೆ ಇದನ್ನು ಹೇಳುವಂತಿಲ್ಲ,” ಎಂದು ಉತ್ತರ ನೀಡಿದ್ದರು.

Comments are closed.