ರಾಷ್ಟ್ರೀಯ

ಮಾಜಿ ಮುಖ್ಯಮಂತ್ರಿಯ ಕಾಲಿಗೆ ಬಿದ್ದು ನಮಸ್ಕರಿಸಿದ ಮೋದಿ!

Pinterest LinkedIn Tumblr


ಗಾಂಧಿನಗರ: ಗುಜರಾತ್ ನ ನ್ಯಾಯಾಲಯವೊಂದರಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಹಾಗೂ ಗುಜರಾತ್ ನ ಮಾಜಿ ಸಿಎಂ ಕೇಶುಭಾಯಿ ಪಟೇಲ್ ಇಬ್ಬರನ್ನೂ ಆಹ್ವಾನಿಸಲಾಗಿತ್ತು. ವೇದಿಕೆ ಏರಿದ ಮೋದಿ ಎಂದಿನಂತೆ ಉಪಸ್ಥಿತರಿದ್ದ ಗಣ್ಯರಿಗೆ ಕೈ ಮುಗಿದು ವಂದಿಸುತ್ತಿದ್ದರು. ಆದ್ರೆ ಮಾಜಿ ಸಿಎಂ ಕೇಶುಭಾಯಿ ಬಳಿ ತಲುಪುತ್ತಿದ್ದಂತೆಯೇ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

ಸುದ್ದಿ ಏಜೆನ್ಸು ANI ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಗಾಂಧಿನಗರ ಜಿಲಾ ನ್ಯಾಯಾಲಯದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೋದಿ ಗುಜರಾತ್ ನ ಮಾಜಿ ಸಿಎಂ ಕಾಲಿಗೆ ನಮಸ್ಕರಿಸುತ್ತಿರುವುದನ್ನು ನೋಡಬಹುದು. ಇದೇ ಸಂದರ್ಭದಲ್ಲಿ ಮೋದಿ ಕೇಶುಬಾಯಿ ಜೊತೆಗೆ ಮಾತನಾಡಿದ್ದಾರೆ. ಮೋದಿ ಕಾಳಿಗೆ ನಮಸ್ಕರಿಸುತ್ತಯಿದ್ದಂತೆಯೇ ಮಾಜಿ ಸಿಎಂ ಮುಖದಲ್ಲಿ ವಿಭಿನ್ನ ಭಾವ ಕಾಣಿಸಿಕೊಂಡಿದೆ.

ಇದಕ್ಕೂ ಮೊದಲು ಪ್ರಧಾನಿ ಮೋದಿ ಅಹಮದಾಬಾದ್ ನಲ್ಲಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ಮುಗಿಸಿ ಸಂಹಜೆ ಹೊತ್ತು ರಾಯ್ ಸೇನ್ ಹಳ್ಳಿಗೆ ತೆರಳಿದ್ದ ಪ್ರಧಾನಿ ಅಲ್ಲಿ ತಮ್ಮ 90ರ ಹರೆಯದ ತಾಯಿ ಹೀರಾ ಬೆನ್ ರನ್ನು ಭೇಟಿಯಾಗಿದ್ದರು. ಹೀರಾ ಬೆನ್ ಮೋದಿಯವರ ಕಿರಿಯ ಸಹೋದರನೊಂದಿಗಿದ್ದಾರೆ. ಇಲ್ಲಿ ಮೋದಿ ತಮ್ಮ ಕುಟುಂಬ ಸದಸ್ಯರೊಂದಿಗೆ ಸುಮಾರು 30 ನಿಮಿಷ ಮಾತುಕತೆ ನಡೆಸಿದ್ದರು.

Comments are closed.