ರಾಷ್ಟ್ರೀಯ

ದೆಹಲಿಯಲ್ಲಿ ಕೈ ಜೊತೆ ಆಪ್​ ಮೈತ್ರಿ ಬಹುತೇಕ ಖಚಿತ

Pinterest LinkedIn Tumblr

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ, ಆಮ್ ಆದ್ಮಿ ಪಕ್ಷದ ಜತೆ ಮೈತ್ರಿ ಸಾಧ್ಯತೆ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ಪಕ್ಷದ ದೆಹಲಿಯ ಘಟಕದ ಮುಖಂಡರನ್ನು ಭೇಟಿಯಾಗಲಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾದ ಬಳಿಕ ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್​​ ಮತ್ತು ಆಮ್​ ಆದ್ಮಿ ಪಕ್ಷಗಳೆರಡು ಹತ್ತಿರವಾಗುತ್ತಿವೆ.

ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್​ ನಿರಾಕರಿಸಿದ ಹಿನ್ನೆಲೆ, ಕೆಲವು ದಿನಗಳ ಹಿಂದಷ್ಟೇ ಆಮ್​ ಆದ್ಮಿ ಪಕ್ಷ ದೆಹಲಿಯ 7 ಲೋಕಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. ಆದರೆ ಕೆಲವು ಮೂಲಗಳ ಪ್ರಕಾರ, ಈಗ ಆಮ್​ ಆದ್ಮಿ ಪಕ್ಷವು ದೆಹಲಿಯಲ್ಲಿ ಕಾಂಗ್ರೆಸ್​​ಗೆ ಎರಡು ಸೀಟುಗಳನ್ನು ಕೊಡಲಿದೆ ಮತ್ತು ಪಂಜಾಬ್​ನಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ​​ 3 ಸೀಟುಗಳಿಗೆ ಪಟ್ಟು ಹಿಡಿದಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಕಾಂಗ್ರೆಸ್​ ದೆಹಲಿಯಲ್ಲಿ ಹೆಚ್ಚಿನ ಸೀಟುಗಳನ್ನು ಕೇಳಿದರೆ, ಆಮ್​ ಆದ್ಮಿ ಪಕ್ಷವು 2014 ರಲ್ಲಿ ಪಂಜಾಬ್​​ನಲ್ಲಿ ಗೆದ್ದಿರುವ ಎಲ್ಲಾ 4 ಸೀಟುಗಳನ್ನು ಉಳಿಸಿಕೊಳ್ಳಲಿದೆ. ಹೀಗಾಗಿ ಸದ್ಯಕ್ಕೆ ಆಮ್​ ಆದ್ಮಿ ತನ್ನ ಚುನಾವಣಾ ಕ್ಯಾಂಪೇನ್​ನ್ನು ನಿಲ್ಲಿಸಿದೆ.

ನಿನ್ನೆ ಚಂದ್ರಬಾಬು ನಾಯ್ಡು ಮತ್ತು ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಇಬ್ಬರೂ ಸಹ ಕೇಜ್ರಿವಾಲ್​ ಹಾಗೂ ಮಮತಾ ಬ್ಯಾನರ್ಜಿ ಜೊತೆ ಮೈತ್ರಿ ಸಾಧ್ಯತೆಗಳ ಬಗ್ಗೆ ಪುನಃ ಚರ್ಚಿಸುವಂತೆ ರಾಹುಲ್​ ಗಾಂಧಿ ಅವರಿಗೆ ಸಲಹೆ ನೀಡಿದ್ದರು ಎನ್ನಲಾಗಿದೆ.

2014ರ ಲೋಕಭಾ ಚುನಾವಣೆಯಲ್ಲಿ ಬಿಜೆಪಿಯು ದೆಹಲಿಯಲ್ಲಿ ಎಲ್ಲಾ 7 ಸೀಟುಗಳನ್ನು ಗೆದ್ದಿತ್ತು. ಆದರೆ ಆಮ್​ ಆದ್ಮಿ ಪಕ್ಷವು ಪ್ರಚಂಡ ಬೆಂಬಲವನ್ನು ಕಂಡಿತ್ತು. 2015ರ ವಿಧಾನಸಭಾ ಚುನಾವಣೆಯಲ್ಲಿ ಆಮ್​ ಆದ್ಮಿ ದೆಹಲಿಯಲ್ಲಿ 70 ಸೀಟುಗಳಲ್ಲಿ 67 ಸೀಟುಗಳನ್ನು ಗೆದ್ದಿತ್ತು.

Comments are closed.