ರಾಷ್ಟ್ರೀಯ

ನಿಮ್ಮ ಆಧಾರ್ ಕಾರ್ಡ್​ ಅನ್ನು ಈ ಸರಳ ವಿಧಾನದ ಮೂಲಕ ಡೌನ್​ಲೋಡ್ ಮಾಡಿಕೊಳ್ಳಿ…!

Pinterest LinkedIn Tumblr

ಹಲವು ಸರ್ಕಾರಿ ಸೇವೆಗಳನ್ನು ಪಡೆಯಲು, ವಿಳಾಸ ದೃಡೀಕರಣಕ್ಕೆ ಆಧಾರ್ ಕಾರ್ಡ್ ಅಗತ್ಯವಾಗಿದೆ. ಆದರೆ ಕೆಲವೊಂದು ಬಾರಿ ನಿಮ್ಮ ಬಳಿ ಆಧಾರ್ ಇರುವುದಿಲ್ಲ. ಇಂತಹ ಸಮಯದಲ್ಲಿ ಚಿಂತಿಸಬೇಕಿಲ್ಲ. ಏಕೆಂದರೆ ಇ-ಆಧಾರ್ ಮೂಲಕ ನಿಮ್ಮ ಆಧಾರ್ ಕಾರ್ಡ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳಬಹುದು. ಇ-ಆಧಾರ್ ಎಂಬುದು ಆಧಾರ್ ಕಾರ್ಡಿನ ಡಿಜಿಟಲ್ ಆವೃತ್ತಿಯಾಗಿದ್ದು, UIDAI ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡುವ ಮುಖಾಂತರ ಆಧಾರ್​ ಕಾರ್ಡ್​ ಅನ್ನು ಯಾವಾಗ ಬೇಕಿದ್ದರೂ ಡೌನ್​ಲೋಡ್​ ಮಾಡಬಹುದಾಗಿದೆ. ಆಧಾರ್ ಕಾರ್ಡ್​ ಅನ್ನು ನಿಮ್ಮ ಮೊಬೈಲ್​ನಲ್ಲೇ ಸುಲಭವಾಗಿ ಹೇಗೆ ಡೌನ್​ಲೋಡ್​ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ಹಂತ 1: ನಿಮ್ಮ ಸ್ಮಾರ್ಟ್​ಫೋನ್​ನ ಬ್ರೌಸರ್​ನಲ್ಲಿ UIDAI (https://uidai.gov.in) ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ.

ಹಂತ 2: ಇದರ ಬಳಿಕ ‘Download Aadhaar’ ಆಯ್ಕೆಯನ್ನು ಕ್ಲಿಕ್ ಮಾಡಿ. ಅಥವಾ https://eaadhaar.uidai.gov.in/ ಲಿಂಕ್ ಒಪನ್ ಮಾಡಿ.

ಹಂತ 3: ಈಗ ನಿಮ್ಮ ವೈಯುಕ್ತಿಕ ವಿವರಗಳನ್ನು ನಮೂದಿಸುವ (‘Enter your personal details’) ಆಯ್ಕೆ ಕಾಣಿಸಲಿದ್ದು, ಅದನ್ನು ಕ್ಲಿಕ್ ಮಾಡಿ.

ಹಂತ 4: ಈಗ ‘Regular Aadhaar’ಆಯ್ಕೆಯನ್ನು ಆರಿಸಿ ಅಲ್ಲಿ ನಿಮ್ಮ ಆಧಾರ್ ಸಂಖ್ಯೆ, ಪೂರ್ಣ ಹೆಸರು, ಪಿನ್ ಕೋಡ್ ಸಂಖ್ಯೆ ಹಾಗೂ ಇತರೆ ಅಗತ್ಯ ವಿವರಗಳನ್ನು ನಮೂದಿಸಿ. ನಿಮ್ಮ ಬಳಿ m-Aadhaar ಆ್ಯಪ್ ಇದ್ದರೆ, ನೀವು TOTP or OTP ಜನರೇಟ್ ಮಾಡಬಹುದು.

ಹಂತ 5: ಈಗ ‘OTP’ ನಂಬರ್​ಗಾಗಿ ರಿಕ್ವೆಸ್ಟ್​ ಕಳುಹಿಸಲು ‘Request OTP’ ಅನ್ನು ಕ್ಲಿಕ್ ಮಾಡಿ.

ಹಂತ 6: ಈಗ ನೀವು ನೋಂದಾಯಿಸಿರುವ ಮೊಬೈಲ್ ಸಂಖ್ಯೆಗೆ 6 ಅಂಕಿಗಳ OTP ನಂಬರ್​ ಅನ್ನು ಕಳುಹಿಸಲಾಗಿರುತ್ತದೆ. ಈ ನಂಬರ್​ ಅನ್ನು ನಮೂದಿಸಿ. ಈ ಸರ್ವೆಯ ಬಳಿಕ ಡೌನ್​ಲೋಡ್ ಆಧಾರ್ ಬಟನ್ ಕ್ಲಿಕ್ ಮಾಡಿ ಕಾರ್ಡ್​ನ್ನು ಡೌನ್​ಲೋಡ್​ ಮಾಡಬಹುದು.

Comments are closed.