ರಾಷ್ಟ್ರೀಯ

ಭಾರತೀಯ ವಾಯುಪಡೆ ನಡೆಸಿದ ಏರ್ ಸ್ಟ್ರೈಕ್ ಸ್ಥಳದಲ್ಲಿ 300 ಮೊಬೈಲ್ ಪತ್ತೆ!

Pinterest LinkedIn Tumblr


ನವದೆಹಲಿ: ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ದಾಳಿ ನಡೆಸುವ ಸ್ಥಳದಲ್ಲಿ 300 ಮೊಬೈಲ್ ಗಳು ಆ್ಯಕ್ಟಿವ್ ಆಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಖಚಿತಪಡಿಸಿದೆ.

ಫೆಬ್ರವರಿ 26ರಂದು ದಾಳಿ ನಡೆದ ಸ್ಥಳದಲ್ಲಿ 300 ಮೊಬೈಲ್ ಫೋನ್ ಗಳು ಕಾರ್ಯನಿರತವಾಗಿದ್ದವು. ದಾಳಿಗೂ ಮುನ್ನ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಭಾರತದ ವಾಯುಪಡೆಗೆ 300 ಜನರು ಮೊಬೈಲ್ ಬಳಸುತ್ತಿರುವ ಖಚಿತ ಮಾಹಿತಿಯನ್ನು ನೀಡಿತ್ತು. ಪಾಕಿಸ್ತಾನದ ಪಖ್ತುನಖ್ವಾ ಪ್ರಾಂತ್ಯದ ಖೈಬರ್ ಉಗ್ರರ ನೆಲೆಯಲ್ಲಿ 300 ಮೊಬೈಲ್ ಫೋನ್‍ಗಳು ಆ್ಯಕ್ಟೀವ್ ಇರೋದನ್ನ ಎನ್‍ಟಿಆರ್‍ಓ ದೃಢಪಡಿಸಿತ್ತು. ಖಚಿತ ಮಾಹಿತಿಯ ಮೇರೆಗೆ ಭಾರತದ ವಾಯಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದನ್ನೂ ಓದಿ: ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

ವಾಯುದಾಳಿಗೂ ಮುನ್ನ ಕೆಲದಿನಗಳಿಂದ ಬಾಲಕೋಟ್ ಉಗ್ರರ ಶಿಬಿರದಲ್ಲಿ 300 ಉಗ್ರರು ಮೊಬೈಲ್ ಬಳಕೆ ಮಾಡುತ್ತಿದ್ದನ್ನು ಎನ್‍ಟಿಆರ್‍ಓ ಖಚಿತ ಮಾಡಿಕೊಂಡಿತ್ತು. ಎನ್‍ಟಿಆರ್‍ಓ ನೀಡಿದ ಸೂಚನೆಯ ಮೇರೆಗೆ ಫಬ್ರವರಿ 26ರ ಬೆಳಗಿನ ಜಾವ ಸುಮಾರು 3 ಗಂಟೆಗೆ ಭಾರತದ ವಾಯುಪಡೆ ದಾಳಿ ನಡೆಸುವ ಮೂಲಕ ಬಾಲಕೋಟ್, ಮುಜಾಫರ್‍ಬಾದ್ ಮತ್ತಿ ಚಿಕೋಟಿ ಉಗ್ರ ಶಿಬಿರಗಳನ್ನು ಧ್ವಂಸಗೊಳಿತ್ತು.

ವಾಯುದಾಳಿ ಬಳಿಕ ಎಷ್ಟು ಜನರು ಉಗ್ರರನ್ನು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಇದೂವರೆಗೂ ನಿಖರ ಅಂಕಿ ಅಂಶಗಳು ಲಭ್ಯವಾಗಿರಲಿಲ್ಲ. ಇಂದು ಸುದ್ದಿಗೋಷ್ಠಿ ನಡೆಸಿದ್ದ ವಾಯುಪಡೆಯ ಮುಖ್ಯಸ್ಥ ಬಿ.ಎಸ್ ಧನೋವಾ, ನೀಡಿದ್ದ ಗುರಿಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು. ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಪಾಕ್ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದರು.

Comments are closed.