ರಾಷ್ಟ್ರೀಯ

ಗಡಿಯೊಳಗೆ ಕದ್ದು ಹಾರಾಟ ಮಾಡ್ತಿದ್ದ ಪಾಕ್ ಡ್ರೋಣ್ ಹೊಡೆದುರುಳಿಸಿದ ಭಾರತೀಯ ವಾಯುಪಡೆ!

Pinterest LinkedIn Tumblr


ನವದೆಹಲಿ: ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಲೇ ಇರುವ ಪಾಕಿಸ್ತಾನ ಸೋಮವಾರ ಮತ್ತೆ ಕೀಟಲೆ ಮಾಡಿದೆ. ರಾಜಸ್ಥಾನ ಗಡಿ ಬಳಿ ಪಾಖ್ ಕಿರಿಕ್ ಮಾಡಿದೆ.

ಪಾಕಿಸ್ತಾನದಿಂದ ಡ್ರೋನ್‌ವೊಂದು ದೇಶದ ಗಡಿಯೊಳಗೆ ಹಾರಾಟ ನಡೆಸಿರುವುದು ವರದಿಯಾಗಿದೆ. ತಕ್ಷಣ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಹೊಡೆದುರುಳಿಸಿವೆ. ಸುಖೋಯ್‌ ಯುದ್ಧ ವಿಮಾನ ಪಾಕಿಸ್ತಾನಕ್ಕೆ ಸರಿಯಾದ ಬುದ್ಧಿ ಕಲಿಸಿದೆ.

ರಾಜಸ್ಥಾನದ ಬಿಕೆನೇರ್‌ ಸಮೀಪ ಈ ಡ್ರೋನ್‌ ಹಾರಾಟ ನಡೆಸಿತ್ತು. ಭಾರತೀಯ ವಾಯು ಗಡಿ ದಾಟಿ ಬರುತ್ತಿದ್ದಂತೆ ಭಾರತೀಯ ಯುದ್ಧ ವಿಮಾನಗಳು ಸಜ್ಜಾಗಿ ಡ್ರೋನ್‌ ಹೊಡೆದುರುಳಿಸಿತು.

Comments are closed.