ರಾಷ್ಟ್ರೀಯ

14 ವರ್ಷಗಳಲ್ಲಿ ಅಧಿಕ ಕುಸಿತ ಕಂಡ ಕೃಷಿ ಆದಾಯದ ಬೆಳವಣಿಗೆ

Pinterest LinkedIn Tumblr


ನವದೆಹಲಿ: ದೇಶದ ಕೃಷಿ ಕ್ಷೇತ್ರದ ಉತ್ಪಾದನೆಯು ಅಕ್ಟೋಬರ್-ಡಿಸೆಂಬರ್ 2018 ರಲ್ಲಿ ಕೇವಲ 2.7 ರಷ್ಟು ಏರಿಕೆ ಕಂಡಿದೆ, ಆ ಮೂಲಕ 14 ವರ್ಷಗಳಲ್ಲೇ ಕನಿಷ್ಠ ಎಂದು ತಿಳಿದುಬಂದಿದೆ.

ಸೆಂಟ್ರಲ್ ಸ್ಟಾಟಿಸ್ಟಿಕ್ಸ್ ಆಫೀಸ್ ಪ್ರಕಾರ ಅಕ್ಟೋಬರ್ -ಡಿಸೆಂಬರ್ 2018 ರಲ್ಲಿನ ಶೇ 2.04 ರ ತ್ರೈಮಾಸಿಕದಲ್ಲಿನ ಬೆಳವಣಿಗೆಯು ಅತಿ ಕನಿಷ್ಠ ಎನ್ನಲಾಗಿದೆ. ಇನ್ನು 2011-12 ರ ಬೇಸ್ ವರ್ಷದ ಸರಣಿ ಪ್ರಕಾರವು ಕೂಡ ಕಡಿಮೆ ಎನ್ನಲಾಗಿದೆ. ಅಕ್ಟೋಬರ್-ಡಿಸೆಂಬರ್ 2004 ರರಲ್ಲಿ ಮೈನಸ್ ಶೇ 1.1ರಷ್ಟು ದಾಖಲಾಗಿತ್ತು ( ಆಗಿನ 1999-2000ರ ಜಿಡಿಪಿ ಸರಣಿ ಪ್ರಕಾರ) ಅಕ್ಟೋಬರ್-ಡಿಸೆಂಬರ್ 2018 ರ ಸತತ ಎರಡನೇ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರದಿಂದ ಸಮಗ್ರ ಮೌಲ್ಯದಲ್ಲಿ ಹೆಚ್ಚಿದ (ಜಿ.ವಿ.ಎ) ಬೆಳವಣಿಗೆಯು ನೈಜವಾಗಿರುವುದಕ್ಕಿಂತ ಅತ್ಯಲ್ಪ ಪ್ರಮಾಣದಲ್ಲಿ ಕಡಿಮೆ ಇದೆ.

ಇನ್ನು ಸರಳವಾಗಿ ಹೇಳುವುದಾದರೆ ಕೊನೆಯ ತ್ರೈಮಾಸಿಕ ಅವಧಿಯಲ್ಲಿನ ಕೃಷಿ ಉತ್ಪಾದನೆ ಅಕ್ಟೋಬರ್-ಡಿಸೆಂಬರ್ 2017 ಕ್ಕಿಂತಲೂ ಶೇ 2.67 ರಷ್ಟು ಅಧಿಕ, ಆದರೆ ಪ್ರಸ್ತಕ ಮೌಲ್ಯದಲ್ಲಿ ಹೆಚ್ಚಳದ ಪ್ರಮಾಣವು ಶೇ 2.04 ರಷ್ಟು ಎನ್ನಲಾಗಿದೆ.ಏಕೆಂದರೆ 0.61 ರಷ್ಟು ಬೆಲೆಯಲ್ಲಿ ಕುಸಿತ ಕಂಡಿರುವುದೇ ಕಾರಣ ಎನ್ನಲಾಗಿದೆ. ಇದು ಕ್ಲಾಸಿಕ್ ಹಣದುಬ್ಬರವಿಳಿತವಾಗಿದೆ, ಅದು ಜನವರಿ-ಮಾರ್ಚ್ 2016 ರಲ್ಲಿ ಈ ರೀತಿ ಆಗಿರಲಿಲ್ಲ. ಆ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರದ ಉತ್ಪಾದನೆ 1.07 ರಷ್ಟು ನೈಜ ಏರಿಕೆ ಕಂಡುಬಂದಿದೆ, ಆದರೆ ನಾಮಮಾತ್ರವಾಗಿ ಬೆಳವಣಿಗೆಯು ಶೇಕಡಾ 7.94 ಇತ್ತು, ಇನ್ನು ಬೆಲೆಗಳು ಶೇ 6.79 ರಷ್ಟು ಏರಿಕೆಯಾಗಿವೆ.

ಅಕ್ಟೋಬರ್-ಡಿಸೆಂಬರ್ 2018 ರವರೆಗಿನ ಕೃಷಿ ಜಿ.ವಿ.ಎ ಬೆಳವಣಿಗೆಯ ಏಳನೇ ತ್ರೈಮಾಸಿಕದಲ್ಲಿಯೂ ಕೂಡ ಒಂದೇ ಅಂಕೆಗಳಲ್ಲಿದೆ. ಅದ್ದರಿಂದ ಇದು ರೈತರಿಗೆ ಒಳ್ಳೆಯು ಸುದ್ದಿ ಅಲ್ಲ ಎಂದು ಹೇಳಬಹುದು,

Comments are closed.