ರಾಷ್ಟ್ರೀಯ

ಅಭಿನಂದನ್ ಗೆ ಪಾಕ್ ನಲ್ಲಿ ಮಾನಸಿಕ ಕಿರುಕುಳ: ವರದಿ

Pinterest LinkedIn Tumblr


ನವದೆಹಲಿ: ಸುಮಾರು 60 ಗಂಟೆಗಳ ಕಾಲ ಪಾಕಿಸ್ತಾನದ ಸೈನಿಕರ ವಶದಲ್ಲಿದ್ದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಮಾನಸಿಕವಾಗಿ ಸಾಕಷ್ಟು ಹಿಂಸಿಸಲಾಗಿತ್ತು ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಆದಾಗ್ಯೂ, ಪಾಕಿಸ್ತಾನಿ ಸೈನಿಕರು ಅಭಿನಂದನ್ ಮೇಲೆ ಯಾವುದೇ ರೀತಿಯ ದೈಹಿಕ ಹಲ್ಲೆ ನಡೆಸಿರಲಿಲ್ಲ ಎಂಬುದು ತಿಳಿದುಬಂದಿದೆ ಎಂದು ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಅಭಿನಂದನ್ ಅವರನ್ನು ಸುರಕ್ಷಿತವಾಗಿ ನೋಡಿಕೊಂಡರೂ ಒತ್ತಾಯ ಪೂರ್ವಕ ಹೇಳಿಕೆ ಪಡೆದು ವಿಡಿಯೋ ಬಿಡುಗಡೆ ಮಾಡಲಾಗಿತ್ತು . ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಯಿತು ಎಂಬ ಮಾತುಗಳು ಕೂಡಾ ಕೇಳಿಬರುತ್ತಿವೆ.
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ರಿಕ್ತ ಪರಿಸ್ಥಿತಿ ನಿರ್ಮಾಣಗೊಂಡ ನಂತರ ಭಾರತದ ಮೇಲೆ ದಾಳಿಗೆ ಮುಂದಾಗಿದ್ದ ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹಿಮ್ಮೆಟ್ಟಿಸುವಲ್ಲಿ ನಿರತವಾಗಿದ್ದ ಭಾರತದ ಮಿಗ್ -21 ವಿಮಾನ ಪತನಗೊಂಡು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಬಿದ್ದಿದ್ದ ಪೈಲಟ್ ಅಭಿನಂದನ್ ಪಾಕಿಸ್ತಾನಿ ಸೈನಿಕರ ಕೈಗೆ ಸೆರೆ ಸಿಕ್ಕಿದ್ದರು.
ಪ್ಯಾರಾಚೂಟ್ ಮೂಲಕ ಪಾಕಿಸ್ತಾನದ ಗಡಿಯೊಳಗೆ ಬಿದಿದ್ದ ಅಭಿನಂದನ್ ಸ್ಥಳೀಯ ಜನರಿಂದ ಹಲ್ಲೆಗೊಳ್ಳಗಾಗಿ ನಂತರ ಪಾಕಿಸ್ತಾನ ಸೈನಿಕರ ವಶದಲ್ಲಿದ್ದ ಅಭಿನಂದನ್ ವರ್ಧನ್ ಮಾನ್ ಅವರನ್ನು ಉತ್ತಮ ರೀತಿಯಲ್ಲಿ ಉಪಚರಿಸಲಾಗಿತ್ತು ಎಂದು ಅಭಿನಂದನ್ ಅವರೇ ಹೇಳಿಕೆ ನೀಡಿದ್ದರು.

Comments are closed.