ರಾಷ್ಟ್ರೀಯ

ಸಹೋದರರನ್ನು ಮದುವೆಯಾಗಿದ್ದ ಸಹೋದರಿಯರು ನಾಲ್ಕು ದಿನದಲ್ಲೇ 11 ಲಕ್ಷದೊಂದಿಗೆ ಪರಾರಿ!

Pinterest LinkedIn Tumblr


ಜೈಪುರ: ಮದುವೆಯಾದ ನಾಲ್ಕು ದಿನದಲ್ಲಿ ಪತಿಯಂದರಿಗೆ ಹಾಲಿನಲ್ಲಿ ನಶೆ ಪದಾರ್ಥ ಬೆರೆಸಿ ಸೋದರಿಯರಿಬ್ಬರು ಮನೆಯಲ್ಲಿ ನಗದು-ಆಭರಣದೊಂದಿಗೆ ಪರಾರಿಯಾಗಿದ್ದಾರೆ. ಮನೆಯಲ್ಲಿಯ ಆಭರಣಗಳ ಜೊತೆಗೆ 11 ಲಕ್ಷದೊಂದಿಗೆ ಸೋದರಿಯರು ಮಿಂಚಿನಂತೆ ಎಸ್ಕೇಪ್ ಆಗಿದ್ದಾರೆ. ಈ ಘಟನೆ ಜೈಪುರದ ಹರಮಾಡ ಪೊಲೀಸ್ ಠಾಣಾ ವ್ಯಾಪ್ತಿಯ ಪೊಖರಿಯಾವಸ ಎಂಬಲ್ಲಿ ನಡೆದಿದೆ.

ಈ ಸಂಬಂಧ ಮೋಸಕ್ಕೊಳಗಾದ ಸಹೋದರರಲ್ಲಿ ಹಿರಿಯಣ್ಣ, ಮದುವೆ ಮಾಡಿಸಿದ ದಲ್ಲಾಳಿ ಮತ್ತು ಯುವತಿಯರಿಬ್ಬರ ವಿರುದ್ಧ ಹರಮಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಮೊಬೈಲ್ ಸ್ವಿಚ್ಛ್ ಆಫ್ ಆಗಿದ್ದು, ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಮನಾರಾಯಣ್ ಮತ್ತು ರಾಜೇಶ್ ಎಂಬ ಸೋದರರಿಗೆ ಚೌಥಮಲ್ (ಹಿರಿಯ ಸೋದರ) ಎಂಬವರು ದಲ್ಲಾಳಿ ಗಜಾನಂದ್ ಎಂಬಾತನನ್ನು ಸಂಪರ್ಕಿಸಿದ್ದರು. ದಲ್ಲಾಳಿ ಸುರೇಶ್ ಎಂಬವರ ಮನೆಯಲ್ಲಿ ಕನ್ಯೆಯರನ್ನು ತೋರಿಸಿದ್ದನು. ಈ ವೇಳೆ ಸುರೇಶ್ ಮತ್ತು ಗಜಾನಂದ್ ವಧು ದಕ್ಷಿಣೆ ಮತ್ತು ಕಮೀಷನ್ 11 ಲಕ್ಷ ರೂ. ನೀಡಬೇಕೆಂದು ಡಿಮ್ಯಾಂಡ್ ಮಾಡಿದ್ದರು.

ವಧುದಕ್ಷಿಣೆಯೊಂದಿಗೆ ಕಮೀಷನ್ ನೀಡಿದ ಚೌಥಮಲ್, ಫೆಬ್ರವರಿ 19ರಂದು ಸಾಮೇದ್ ಬಳಿಯ ಮೈರಿಜ್ ಗಾರ್ಡನ್ ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಮದುವೆಗಾಗಿಯೇ ವರನ ಕುಟುಂಬಸ್ಥರು 9 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದರು. ಫೆಬ್ರವರಿ 23ರಂದು ಸೋದರಿಯರಿಬ್ಬರು ತಮ್ಮ ಪತಿಯಂದಿರಿಗೆ ಮದ್ದು ಬರುವ ಔಷಧಿ ನೀಡಿ ಮನೆಯಲ್ಲಿಯ ನಗದು, ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. .

Comments are closed.