ರಾಷ್ಟ್ರೀಯ

ಬಾಲಕಿಯ ಮೇಲೆ 12 ವರ್ಷದ ಬಾಲಕನಿಂದ ನಿರಂತರ ಅತ್ಯಾಚಾರ; ಮಹಾರಾಷ್ಟ್ರದಲ್ಲೊಂದು ಅಮಾನುಷ ಕೃತ್ಯ

Pinterest LinkedIn Tumblr

ಮಹಾರಾಷ್ಟ್ರ: ಹಿಂದಿನ ಕಾಲದ ಮಕ್ಕಳ ಬಾಲ್ಯಕ್ಕೂ ಇಂದಿನ ಕಾಲಕ್ಕೂ ಬಹಳ ವ್ಯತ್ಯಾಸವಿದೆ. ಆಗಿನ ಕಾಲದಲ್ಲಿ ಮಕ್ಕಳಿಗೆ ಆಟವಾಡುವುದರಲ್ಲೇ ಇಡೀ ದಿನ ಕಳೆದುಹೋಗುತ್ತಿತ್ತು. ಆದರೆ, ಈಗಿನವರು ವಿಡಿಯೋ ಗೇಮ್​, ಮೊಬೈಲ್​ ಮುಂದೆ ಕುಳಿತರೆ ಅವರಿಗೆ ಬೇರಾವುದೂ ಬೇಡ. ಅವರ ಬಾಲ್ಯ ತಂತ್ರಜ್ಞಾನಗಳ ಸುಳಿಗೆ ಸಿಕ್ಕು ನಲುಗಿ ಹೋಗುತ್ತಿದೆ. ಇಷ್ಟೇ ಆದರೆ ಪರವಾಗಿಲ್ಲ… ಆದರೆ, ಮಕ್ಕಳ ಬಾಲ್ಯವನ್ನು ಮಕ್ಕಳೇ ಕಸಿದುಕೊಂಡರೆ ಪರಿಸ್ಥಿತಿ ಹೇಗಿರುತ್ತದೆ? ಅಂಥದ್ದೊಂದು ಅಮಾನುಷ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಪಲ್ಗಾರ್​ ಜಿಲ್ಲೆಯ ಸಣ್ಣದೊಂದು ಹಳ್ಳಿ. ಆ ಹಳ್ಳಿಯಲ್ಲಿ ಇನ್ನೂ ಹೆಚ್ಚಿನ ಆಧುನಿಕತೆ ಕಾಲಿಟ್ಟಿರಲಿಲ್ಲ. ಆದರೆ, ಇದೀಗ ಆ ಹಳ್ಳಿ ಇಡೀ ದೇಶದಲ್ಲಿ ಸುದ್ದಿಯಾಗಿದೆ. ಅದಕ್ಕೆ ಕಾರಣ ಆ ಊರಿನ ಒಬ್ಬ ಹುಡುಗ. ಆ ಹಳ್ಳಿಯ 12 ವರ್ಷದ ಬಾಲಕ 10 ವರ್ಷದ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಮಾಡಿರುವ ಘಟನೆ ಇದೀಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

ಅತ್ಯಾಚಾರ ಮಾಡಿದ ಹುಡುಗ ಮತ್ತು ಅತ್ಯಾಚಾರಕ್ಕೆ ಒಳಗಾದಾಕೆ ಇಬ್ಬರೂ ನೆರೆಹೊರೆಯವರು ಎಂದು ತಿಳಿದು ಬಂದಿದೆ. ಬಾಲಕ 10 ವರ್ಷದ ಬಾಲಕಿಯ ಮೇಲೆ ಕಳೆದ 4 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ಸಂತ್ರಸ್ಥೆ ಬಾಲಕಿ ಹೊಟ್ಟೆನೋವು ಎಂದು ತನ್ನ ಪೋಷಕರ ಬಳಿ ಹೇಳಿದ್ದಾಳೆ. ಆಗ ಅವರು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಿಸಿದ್ದಾರೆ. ಆಗ ಬಾಲಕಿ ಗರ್ಭಿಣಿ ಆಗಿರುವ ವಿಷಯ ಬೆಳಕಿಗೆ ಬಂದಿದೆ.

ಪೋಷಕರು ಏನಾಯಿತು ಎಂದು ಕೇಳಿದಾಗ, ಬಾಲಕಿ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಬಳಿಕ ಸಂತ್ರಸ್ಥೆಯ ಪೋಷಕರು ಬಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್​ 376 (ಅತ್ಯಾಚಾರ) ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Comments are closed.