ರಾಷ್ಟ್ರೀಯ

‘ಅಭಿನಂದನ್ ‘ಎಂಬ ಶಬ್ದಕ್ಕೆ ಹೊಸ ಅರ್ಥ ದೊರಕಿದೆ: ಪ್ರಧಾನಿ ಮೋದಿ

Pinterest LinkedIn Tumblr

ನವದೆಹಲಿ: ಇದುವರೆಗೆ “ಅಭಿನಂದನ್” ಎಂಬ ಸಂಸ್ಕೃತ ಪದಕ್ಕೆ ಇದ್ದ ಅರ್ಥ ಇಂದು ಬದಲಾಗಿದೆ, ಹೊಸ ಅರ್ಥ ದೊರಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶನಿವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿರುವ ಐಎಎಫ್ ಪೈಲಟ್ ಅಭಿನಂದನ್ ವರ್ತಮಾನ್ ಅವರನ್ನುದ್ದೇಶಿಸಿ ಪ್ರಧಾನಿ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಭಾರತ ಈಗ ಏನೇ ಮಾಡಿದರೂ ಜಗತ್ತು ಗಮನವಿಟ್ಟು ನೋಡುತ್ತದೆ. ಈಗಿನ ಭಾರತಕ್ಕೆ ನಿಘಂಟಿನಲ್ಲಿರುವ ಪದದ ಅರ್ಥವನ್ನೇ ಬದಲಿಸುವ ತಾಕತ್ತಿದೆ. ಈ ಹಿಂದೆ ಅಭಿನಂದನ್ ಎಂಬ ಸಂಸ್ಕೃತದ ಪದಕ್ಕೆ congratulation ಎನ್ನುವ ಅರ್ಥವಿತ್ತು. ಆದರೆ ಇನ್ನು ಮುಂದೆ ಆ ಅರ್ಥ ಬೇರೆಯಾಗಿರಲಿದೆ.” ಮೋದಿ ಹೇಳಿದ್ದಾರೆ.

ದೆಹಲಿಯ ವಿಗ್ಣಾನ್ ಭವನದಲ್ಲಿ ನಡೆದ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಆಫ್ ಇಂಡಿಯಾ 2019 ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಅಭಿನಂದನ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಸುಮಾರು ಮೂರು ದಿನಗಳ ಕಾಲ ಪಾಕಿಸ್ತಾನದ ವಶದಲ್ಲಿದ್ದ ಅಭಿನಂದನ್ ವರ್ತಮಾನ್ ಅವರನ್ನು ಶುಕ್ರವಾರ ರಾತ್ರಿ ಒಂಬತ್ತರ ಸುಮಾರಿಗೆ ಭಾರತಕ್ಕೆ ಹಸ್ತಾಂತರಿಸಲಾಗಿದೆ.

ನಿನ್ನೆ ಅಭಿನಂದನ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದೊ “ತಾಯ್ನಾಡಿಗೆ ಸ್ವಾಗತ, ವಿಂಗ್ ಕಮಾಂಡರ್ ಅಭಿನಂದನ್! ನಿಮ್ಮ ಧೈರ್ಯ ಆದರ್ಶಪ್ರಾಯವಾಗಿದ್ದು ಇದಕ್ಕಾಗಿ ಇಡೀ ದೇಶ ನಿಮ್ಮ ಕುರಿತು ಹೆಮ್ಮೆ ಪಡುತ್ತದೆ” ಎಂದು ಟ್ವೀಟ್ ಮಾಡಿದ್ದರು.

Comments are closed.