ರಾಷ್ಟ್ರೀಯ

‘ಯುದ್ಧಕ್ಕಾಗಿ ಕೂಗುತ್ತಿರುವವರು ಅವರೇ ಸ್ವತಃ ಹೋಗಿ ಹೋರಾಡಲಿ’: ಹುತಾತ್ಮ ನಿನಾದ್ ಪತ್ನಿ ವಿಜೇತ

Pinterest LinkedIn Tumblr

ಮುಂಬೈ: “ಯುದ್ಧಕ್ಕಾಗಿ ಕೂಗುತ್ತಿರುವವರು ಅವರೇ ಸ್ವತಃ ಹೋಗಿ ಹೋರಾಡಲಿ, ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧದ ಬಗ್ಗೆ ಭುಗಿಲೆದ್ದಿರುವ ವಾತಾವರಣ ನಿಜಕ್ಕೂ ಭಯಾನಕ…”. ಇದು ಯಾರೋ ಸಾಮಾನ್ಯ ವ್ಯಕ್ತಿಯ ಹೇಳಿಕೆಯಲ್ಲ. ಸ್ಕ್ವಾಡ್ರನ್ ಲೀಡರ್ ನಿನಾದ್ ಮಾಂಡವಗನೆ ಅವರ ಪತ್ನಿ ವಿಜೇತ.

ಜಮ್ಮು-ಕಾಶ್ಮೀರದಲ್ಲಿ ಐಎಎಫ್ ನ ಚಾಪರ್ ಪತನದಲ್ಲಿ ಹುತಾತ್ಮರಾದ ಸ್ಕ್ವಾಡ್ರನ್ ಲೀಡಾರ್ ನಿನಾದ್ ಅವರ ಅಂತ್ಯಕ್ರಿಯೆ ಮಾ.01 ರಂದು ನಡೆದಿದ್ದು, ಈ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ವಿಜೇತಾ, ಸಾಮಾಜಿಕ ಜಾಲತಾಣದಲ್ಲಿ ಯುದ್ಧೋನ್ಮಾದ ಪರಿಸ್ಥಿತಿ ಉಂಟಾಗಿರುವುದರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆರಾಮಾಗಿ ಯುದ್ಧಕ್ಕಾಗಿ ಕೂಗುವವರು ಯುದ್ಧ ಮಾಡಲು ಗಡಿಗೆ ತೆರಳಲಿ, ಸ್ವತಃ ಯುದ್ಧ ಮಾಡಲಿ ಎಂದು ಹೇಳಿದ್ದಾರೆ. ನಿಮಗೆ ತುಂಬಾ ಜೋಷ್ ಇದ್ದರೆ ಹೋಗಿ ಸೇನೆ ಸೇರ್ಪಡೆಗೊಳ್ಳಿ ಅದರ ಅನುಭವ ಹೇಗಿರುತ್ತದೆ ಎಂಬುದನ್ನು ನೋಡಿ ಎಂದು ಸಾಮಾಜಿಕ ಜಾಲತಾಣದ ಯೋಧರಿಗೆ ಸಲಹೆ ನೀಡುತ್ತೇನೆ ಎಂದು ವಿಜೇತಾ ಹೇಳಿದ್ದಾರೆ.

ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಸ್ವಾಡ್ರನ್ ನಿನಾದ್ ಐಎಎಫ್ ನಲ್ಲಿ ಹೆಲಿಕಾಫ್ಟರ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಷ್ಟ್ರಮಟ್ಟದ ಹಾಕಿ ಆಟಗಾರರೂ ಆಗಿದ್ದ ನಿನಾದ್ ಗೆ 2 ವರ್ಷದ ಮಗು, ಪತ್ನಿ, ಸಹೋದರ, ನಿವೃತ್ತ ತಂದೆ-ತಾಯಿಯನ್ನು ಅಗಲಿದ್ದಾರೆ.

Comments are closed.