
ನವದೆಹಲಿ: ಬುಧವಾರ ಬೆಳಗ್ಗೆ ಪಾಕಿಸ್ತಾನ ಭಾರತದ ವಾಯು ಗಡಿರೇಖೆಯನ್ನು ಉಲ್ಲಂಘಿಸಿದೆ ಎಂಬ ಮಾಹಿತಿ ಸರ್ಕಾರದ ಉನ್ನತ ಮೂಲಗಳು ನ್ಯೂಸ್ 18ಗೆ ತಿಳಿದುಬಂದಿದೆ. ಪಾಕಿಸ್ತಾನದ 20ಕ್ಕೂ ಹೆಚ್ಚು ವಿಮಾನಗಳು ಬುಧವಾರ ಬೆಳಗ್ಗೆ 9.45ರ ವೇಳೆ ಭಾರತೀಯ ವಾಯು ವಲಯ ಪ್ರದೇಶದ ಗಡಿರೇಖೆಯನ್ನು ಉಲ್ಲಂಘಿಸಿವೆ ಮತ್ತು ಹತ್ತು ಕಿ.ಮೀ. ಒಳಗೆ ಬಂದಿವೆ. ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು, ಲೇಸರ್ ಗೈಡೆಡ್ಗಳನ್ನು ಸ್ಪೋಟಿಸಿವೆ.
ಆದರೆ, ಕ್ಷಿಪಣೆಗಳ ಗುರಿ ತಪ್ಪಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ. ಆದರೆ, ತಾವು ಭಾರತೀಯ ಸೇನೆಯನ್ನು ಗುರಿಯನ್ನಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಪಾಕಿಸ್ತಾನ ಸುಳ್ಳು ಹೇಳಿಕೊಳ್ಳುತ್ತಿರುವುದಾಗಿ ಮೂಲಗಳು ಹೇಳಿವೆ. ಮೂಲಗಳ ಪ್ರಕಾರ, ಆ ಸ್ಥಳದಲ್ಲಿ ಭದ್ರತಾ ಪಡೆಯನ್ನು ರದ್ದು ಮಾಡಲಾಗಿಲ್ಲ. ಪ್ರಮುಖ ಸ್ಥಾನಗಳನ್ನು ಹೊಂದಿರುವ ಸಿಬ್ಬಂದಿಯನ್ನು ಕಡಿತಗೊಳಿಸಲಾಗಿದೆ. ಗಡಿರೇಖೆ ಉಲ್ಲಂಘನೆ ಸಂಬಂಧ ಕೆಲ ಪಡೆಗಳು ತತ್ಕ್ಷಣದ ನೋಟಿಸ್ ನೀಡಲು ಸಿದ್ಧವಾಗುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್ ಎಫ್-16 ಯುದ್ಧವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್ ಮೂಲಕ ಕೆಳಗಿಳಿದ ಅಭಿನಂದನ್ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು. 1971ರ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ವಾಯು ಯುದ್ಧ ನಡೆದಿದ್ದು ಇದೇ ಮೊದಲು.
ನೆನ್ನೆಯ ವಾಯು ಯುದ್ಧದಲ್ಲಿ ಪಾಕಿಸ್ತಾನದ ಎಫ್-1 ವಿಮಾನವನ್ನು ಹೊಡೆದುರುಳಿಸಿದ್ದಾಗಿ ಭಾರತ ಹೇಳಿಕೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ನಾವು ಭಾರತದ ಮಿಗ್-21 ವಿಮಾನವನ್ನು ನೆಲಕ್ಕುರುಳಿಸಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ.
Comments are closed.