ರಾಷ್ಟ್ರೀಯ

ಅಮೆರಿಕಾಗೆ ಪಾಕಿಸ್ತಾನದಲ್ಲಿದ್ದ ಲ್ಯಾಡನ್ ನ್ನು ಹತ್ಯೆ ಮಾಡಬಹುದಾದರೆ ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ: ಜೇಟ್ಲಿ

Pinterest LinkedIn Tumblr

ನವದೆಹಲಿ: ಪಾಕಿಸ್ತಾನದ ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಪಣತೊಟ್ಟಿರುವ ಭಾರತ ವಾಯುಪಡೆ ಈಗಾಗಲೇ ಪಾಕ್ ಉಗ್ರರ ಕ್ಯಾಂಪ್ ಮೇಲೆ ಬಾಂಬ್ ಮಳೆಗರೆದು 300 ಕ್ಕೂ ಹೆಚ್ಚು ಉಗ್ರರನ್ನು ನಿರ್ನಾಮ ಮಾಡಿದೆ. ಅಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಭಾರತದ ಸೇನೆಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಯತ್ನಿಸುತ್ತಿದೆ.

ಈ ನಡುವೆಯೇ ವಿತ್ತ ಸಚಿವ ಅರುಣ್ ಜೇಟ್ಲಿ, ಸುದ್ಧಿಗೋಷ್ಠಿಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದು, ಅಮೆರಿಕಾಗೆ ತಲೆನೋವಾಗಿದ್ದ ಒಸಾಮ ಬಿನ್ ಲ್ಯಾಡನ್ ಹತ್ಯೆ ಕಾರ್ಯಾಚರಣೆಯ ಉದಾಹರಣೆ ನೀಡಿದ್ದಾರೆ.

ಅಮೆರಿಕಾಗೆ ಪಾಕಿಸ್ತಾನದಲ್ಲಿದ್ದ ಒಸಾಮ ಬಿನ್ ಲ್ಯಾಡನ್ ನ್ನು ಪಾಕಿಸ್ತಾನಕ್ಕೇ ನುಗ್ಗಿ ಹತ್ಯೆ ಮಾಡಬಹುದಾದರೆ ಅಂತಹ ಕಾರ್ಯಾಚರಣೆ ಭಾರತಕ್ಕೆ ಏಕೆ ಸಾಧ್ಯವಿಲ್ಲ, ಯಾವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ ಎಂದಷ್ಟೇ ಹೇಳಿಕೆ ನೀಡಿ ಅಚ್ಚರಿ, ಕುತೂಹಲ ಮೂಡಿಸಿದ್ದಾರೆ.

Comments are closed.