ರಾಷ್ಟ್ರೀಯ

ಬಾಲ್ ಕೋಟ್ ಮೇಲಿನ ಭಾರತದ ಸರ್ಜಿಕಲ್ ಸ್ಟ್ರೈಕ್​ಗೆ ಜೈಹೋ ಎಂದ​ ಸೆಲೆಬ್ರಿಟಿಗಳು

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಜೈಷ್​-ಇ- ಮೊಹಮದ್ ಭಯೋತ್ಪಾದಕ ಶಿಬಿರದ ಮೇಲೆ ಸರ್ಜಿಕಲ್ ದಾಳಿ ನಡೆಸಿದ ಭಾರತೀಯ ಸೇನೆಗೆ ಕಾಲಿವುಡ್​, ಬಾಲಿವುಡ್​ ಸೆಲೆಬ್ರಿಟಿಗಳು ಕೂಡ ಶಹಬ್ಬಾಸ್​ಗಿರಿ ನೀಡಿದ್ದಾರೆ. ಪುಲ್ವಾಮಾ ದಾಳಿಗೆ ಪ್ರತೀಕಾರ ತೀರಿಸಿಕೊಂಡ ಭಾರತದ ನಡೆಯ ಬಗ್ಗೆ ಟ್ವೀಟ್​ ಮಾಡಿರುವ ನಟರಾದ ರಜನಿಕಾಂತ್​, ಕಮಲಹಾಸನ್, ಅಕ್ಷಯಕುಮಾರ್​, ಸಲ್ಮಾನ್​ ಖಾನ್, ಅಜಯ್​ ದೇವಗನ್, ಅಭಿಷೇಕ್​ ಬಚ್ಚನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಭಾರತೀಯ ವಾಯುಸೇನೆ ಬಗ್ಗೆ ಹೆಮ್ಮೆಯೆನಿಸುತ್ತದೆ. ಜೈ ಹೋ!! ಎಂದು ಬಾಲಿವುಡ್​ ನಟ ಸಲ್ಮಾನ್​ ಖಾನ್ ಹೇಳಿದ್ದಾರೆ.

ಬ್ರಾವೋ ಇಂಡಿಯಾ (ಶಹಬ್ಬಾಸ್​) ಎಂದು ಸೂಪರ್​ಸ್ಟಾರ್​ ರಜನಿಕಾಂತ್​ ಟ್ವೀಟ್​ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಭಯೋತ್ಪಾದಕರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ನಮ್ಮ ದೇಶದ 12 ಯುದ್ಧವಿಮಾನಗಳು ಸುರಕ್ಷಿತವಾಗಿ ವಾಪಾಸ್​ ಬಂದಿವೆ. ಈ ಹೀರೋಗಳ ಬಗ್ಗೆ ಭಾರತ ಹೆಮ್ಮೆ ಪಡುತ್ತದೆ ಎಂದು ತಮಿಳು ನಟ ಕಮಲಹಾಸನ್​ ಟ್ವೀಟ್​ ಮಾಡಿದ್ದಾರೆ.

ಭಾರತೀಯ ವಾಯುಸೇನೆ ನಮ್ಮ ಹೆಮ್ಮೆ. ದೇಶಕ್ಕಾಗಿ ಉಗ್ರರ ಜಾಗಕ್ಕೆ ತೆರಳಿ ದಾಳಿ ನಡೆಸಿ ಬಂದಿದ್ದಾರೆ. ಇನ್ನು ನಾವು ಸುಮ್ಮನೆ ಕೂರುವುದಿಲ್ಲ… ಎಲ್ಲದಕ್ಕೂ ತಿರುಗೇಟು ಕೊಡುತ್ತೇವೆ ಎಂದು ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ.

ಭಾರತದ ಸೇನೆಗೆ ನನ್ನ ಸಲ್ಯೂಟ್​ ಎಂದು ನಟ ವರುಣ್​ ಧವನ್ ಟ್ವೀಟ್​ ಮಾಡಿದ್ದಾರೆ. ಬಾಲಿವುಡ್​ ನಟಿಯರಾದ ಸ್ವರ ಭಾಸ್ಕರ್​ ಕೂಡ ಸೇನೆಗೆ ಸಲ್ಯೂಟ್​ ಮಾಡಿದ್ದಾರೆ.

ನಮ್ಮ ದೇಶವನ್ನು ಸುರಕ್ಷಿತವಾಗಿಡಲು ಭಾರತೀಯ ಸೇನೆ ತೋರಿದ ಅಪರಿಮಿತ ಉತ್ಸಾಹ ಮತ್ತು ಧೈರ್ಯಕ್ಕೆ ದೊಡ್ಡ ಸಲ್ಯೂಟ್​ ಎಂದು ಬಾಲಿವುಡ್ ನಟ ಸಂಜಯ್​ ದತ್​ ಹೇಳಿದ್ದಾರೆ.

ನಟಿ ರವೀನಾ ಟಂಡನ್​ ಕೂಡ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಟ್ವೀಟ್​ ಮಾಡಿದ್ದು, ಭಾರತ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯನ್ನು ಇಡೀ ದೇಶವೇ ಸಂಭ್ರಮಿಸುತ್ತದೆ. 12 ಯುದ್ಧ ವಿಮಾನಗಳ ನೇತೃತ್ವ ವಹಿಸಿದ್ದವರ ಗಟ್ಟಿ ಹೃದಯಕ್ಕೆ ನನ್ನ ದೊಡ್ಡ ಸಲ್ಯೂಟ್​. ಶತ್ರುರಾಷ್ಟ್ರದೊಳಗೆ ಹೋಗಿ ದಾಳಿ ಮಾಡಿ ಬರುವುದು ಸುಲಭದ ಮಾತಲ್ಲ. ಪುಲ್ವಾಮಾದಲ್ಲಿ ಪ್ರಾಣತ್ಯಾಗ ಮಾಡಿದವರ ಆತ್ಮಕ್ಕೆ ಈಗ ಶಾಂತಿ ಸಿಕ್ಕಿರಬಹುದು. ನಮ್ಮ ನೆರೆಯ ರಾಷ್ಟ್ರಗಳು ಭಯೋತ್ಪಾದನೆಯ ಬಗ್ಗೆ ಆರೋಪ ಮಾಡುವುದರಲ್ಲೇ ಸಮಯ ಕಳೆಯುತ್ತಿವೆ. ಅವರು ನಮಗೆ ಧನ್ಯವಾದ ಹೇಳಬೇಕು ಎಂದು ಟ್ವೀಟ್​ ಮಾಡಿದ್ದಾರೆ.

ಬಾಲಿವುಡ್​ ನಟಿ ದಿಯಾ ಮಿರ್ಜಾ ಕೂಡ ಟ್ವೀಟ್​ ಮಾಡಿದ್ದು, 12 ಸೈನಿಕರೂ ಸುರಕ್ಷಿತವಾಗಿ ವಾಪಾಸ್​ ಆಗಿದ್ದಾರೆ ಎಂಬುದು ಖುಷಿಯ ವಿಚಾರ. ಭಾರತೀಯ ವಾಯುಸೇನೆಗೆ ದೊಡ್ಡ ಸಲ್ಯೂಟ್​ ಎಂದಿದ್ದಾರೆ.

ಇವರಷ್ಟೇ ಅಲ್ಲದೆ ಅಭಿಷೇಕ್​ ಬಚ್ಚನ್, ಟಾಲಿವುಡ್​ ನಟ ಸಿದ್ಧಾರ್ಥ್​, ಬಾಲಿವುಡ್​ ನಟರಾದ ಸೊನಾಕ್ಷಿ ಸಿನ್ಹಾ, ಸುನೀಲ್​ ಶೆಟ್ಟಿ, ಸೋನು ಸೂದ್, ಅನುಪಮ್​ ಖೇರ್, ವಿವೇಕ್​ ಒಬೆರಾಯ್​ ಕೂಡ ಟ್ವೀಟ್​ ಮಾಡಿದ್ದಾರೆ.

Comments are closed.