ರಾಷ್ಟ್ರೀಯ

ತಿರುಪತಿಯಲ್ಲಿ ಪಂಚೆ ಕಟ್ಟಿ ನಡೆಯಲು ತಿಣುಕಾಡಿದ ರಾಹುಲ್ ಗಾಂಧಿ

Pinterest LinkedIn Tumblr


ತಿರುಪತಿ: ಚುನಾವಣೆ ಸಂದರ್ಭಗಳಲ್ಲಿ ಹೆಚ್ಚು ದೇವಾಲಯಗಳಿಗೆ ಭೇಟಿ ನೀಡುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಫೆ.22 ರಂದು ತಿರುಪತಿ ದೇವಾಲಯಕ್ಕೆ ಬೆಟ್ಟ ಹತ್ತಿ ನಡೆದು ಹೋಗಿದ್ದರು.
ದೇವಾಲಯಕ್ಕೆ ತೆರಳುವುದಕ್ಕೂ ಮುನ್ನ ರಾಹುಲ್ ಗಾಂಧಿ ಕಚ್ಚೆ ಪಂಚೆ ಕಟ್ಟಿ ತೆರಳಿದ್ದರು. ಆದರೆ ಪಂಚೆ ಕಟ್ಟಿದ್ದ ರಾಹುಲ್ ಗಾಂಧಿಗೆ ಆರಾಮಾಗಿ ನಡೆಯುವುದಕ್ಕಾಗದೇ ತಿಣುಕಾಡಿದ ವಿಡಿಯೋ ಈಗ ವೈರಲ್ ಆಗತೊಡಗಿದೆ.
ಕೆಲವರು ರಾಹುಲ್ ಗಾಂಧಿ ಪಂಚೆ ಕಟ್ಟಿ ನಡೆಯುತ್ತಿರುವ ವಿಡಿಯೋವನ್ನು ಕೆಲವರು ಟ್ರೋಲ್ ಕೂಡಾ ಮಾಡಿದ್ದು, ಪಂಚೆ ಕಟ್ಟು ನಡೆಯಲು ಸಾಧ್ಯವಾಗದೇ ಇರುವವರು ದೇಶವನ್ನು ಕಟ್ಟಿ ನಡೆಸುತ್ತಾರಾ? ಎಂದು ಕೇಳಿ ಟ್ರೋಲ್ ಮಾಡಲಾಗಿರುವ ವಿಡಿಯೋ ಸಹ ವೈರಲ್ ಆಗತೊಡಗಿದೆ.

Comments are closed.