ರಾಷ್ಟ್ರೀಯ

ಮಾಜಿ ಕ್ರಿಕೆಟ್ ಆಟಗಾರ ಕೀರ್ತಿ ಅಜಾದ್ ಕಾಂಗ್ರೆಸ್ ಸೇರ್ಪಡೆ

Pinterest LinkedIn Tumblr


ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ಬಿಜೆಪಿಯಿಂದ ಅಮಾನತುಗೊಂಡಿದ್ದ ಕೀರ್ತಿ ಅಜಾದ್ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ಇಂದು ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಗೊಂಡಿದ್ದೇನೆ. ಸಾಂಪ್ರದಾಯಿಕ ಮಿಥಿಲಾ ಶೈಲಿಯಲ್ಲಿ ಅವರನ್ನು ನಾನು ಸನ್ಮಾನಿಸಿದ್ದೇನೆ ಎಂದು ಹೇಳಿದ್ದಾರೆ.

ಕೀರ್ತಿ ಅಜಾದ್ ಮಾಜಿ ಕ್ರಿಕೆಟ್ ಆಟಗಾರಾಗಿದ್ದು, 1983ರಲ್ಲಿ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಾಗಿದ್ದಾರೆ. ಬಿಜೆಪಿಯಿಂದ ರಾಜಕೀಯ ಜೀವನ ಆರಂಭಿಸಿದ ಅವರು 1999ರಲ್ಲಿ ಮೊದಲ ಬಾರಿಗೆ ದರ್ಭಂಗ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರು ಮೂರು ಬಾರಿ ಬಿಜೆಪಿಯಿಂದ ಜಯಗಳಿದ್ದರು.

ಅಜಾದ್ ಅವರು ಫೆಬ್ರವರಿ 15ರಂದು ಕಾಂಗ್ರೆಸ್ ಸೇರ್ಪಡೆಯಾಗಲು ನಿರ್ಧರಿಸಿದ್ದರು. ಆದರೆ ಪುಲ್ವಾಮಾದ ಉಗ್ರರ ದಾಳಿಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹೀಗಾಗಿ ಇಂದು ಅಧಿಕೃತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಅಮಾನತು ಮಾಡಿದ್ದು ಯಾಕೆ?:
ಅಜಾದ್ ಅವರ ವಿರುದ್ಧ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್(ಡಿಡಿಸಿಎ)ನಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಹೀಗಾಗಿ ಬಿಜೆಪಿ 2015ರಲ್ಲಿ ಅಮಾನತು ಮಾಡಿತ್ತು. ಬಳಿಕ ಆಮ್ ಆದ್ಮಿ ಪಕ್ಷ ಸೇರಿದ್ದರು. ಆದರೆ ಈಗ ಅಲ್ಲಿಂದ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.

Comments are closed.