ರಾಷ್ಟ್ರೀಯ

ಗೆಳೆಯನ ಜೊತೆ ಸೇರಿ ಪ್ರೇಯಸಿ ಮೇಲೆಯೇ ಅತ್ಯಾಚಾರ!

Pinterest LinkedIn Tumblr


ಮುಂಬೈ: ಬರ್ತಡೇ ಪಾರ್ಟಿಯಲ್ಲಿ ಪ್ರೇಯಸಿ ಮೇಲೆ ಪ್ರಿಯಕರನೇ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪಲ್ಘಹಾರ್‌ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸ್​​ ಮೂಲಗಳು ತಿಳಿಸಿವೆ.

ಐದು ದಿನದ ಹಿಂದೆಯೇ ಪ್ರಿಯಕರ ಸ್ನೇಹಿತನೊಬ್ಬನ ಮನೆಯಲ್ಲಿ ತನ್ನ ಪ್ರೇಯಸಿ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಿದ್ದ. ಈ ವೇಳೆ ಆಕೆ ಜತೆಗೆ ಪ್ರಿಯಕರ ಮತ್ತು ತನ್ನ ಸ್ನೇಹಿತನು ಭಾರೀ ಪ್ರಮಾಣದಲ್ಲಿ ಮದ್ಯ ಸೇವನೆ ಮಾಡಿದ್ದಾರೆ.

ಸ್ನೇಹಿತನ ಮನೆಯಲ್ಲಿ ಆಯೋಜಿಸಿದ್ದ ಸಂತೋಷ ಕೂಟದಲ್ಲಿ ಕುಡಿದಿದ್ದ ಎಲ್ಲರಿಗೂ ತುಂಬಾ ನಶೆ ಏರಿದೆ. ಈ ವೇಳೆ ಕುಡಿದ ಮತ್ತಿನಲ್ಲಿಯೇ ಪ್ರಿಯಕರ ಸ್ನೇಹಿತನ ಜೊತೆ ಸೇರಿ ಪ್ರೇಯಸಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಮದ್ಯದ ನಶೆಯಲ್ಲಿದ್ದಾಗ ಪ್ರೇಯಸಿಯನ್ನ ಅತ್ಯಾಚಾರ ಮಾಡಿದ ಈ ಕಿಡಿಗೇಡಿ ಯಾರಿಗೂ ಹೇಳದಂತೆಯೂ ಆಕೆಗೆ ಬೆದರಿಕೆವೊಡ್ಡಿದ್ದಾನೆ. 27 ವರ್ಷದ ಈ ಯುವತಿಯು ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

Comments are closed.