ರಾಷ್ಟ್ರೀಯ

ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆದ ಕೇಂದ್ರ ಸರ್ಕಾರ

Pinterest LinkedIn Tumblr

ಜಮ್ಮು-ಕಾಶ್ಮೀರ: ಪಾಕಿಸ್ತಾನ ಹಾಗೂ ಐಎಸ್ ಐ ಜೊತೆಗಿನ ನಂಟಿನ ಹಿನ್ನೆಲೆಯಲ್ಲಿ ಮಿರ್ವೈಜ್ ಉಮರ್ ಫಾರುಖ್ ಸೇರಿದಂತೆ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ಕೇಂದ್ರ ಸರ್ಕಾರ ಇಂದು ಹಿಂಪಡೆದಿದೆ.

ಪುಲ್ವಾಮಾ ಉಗ್ರರ ದಾಳಿಯಲ್ಲಿ 40 ಸಿಆರ್ ಪಿಎಫ್ ಯೋಧರ ಹುತಾತ್ಮರಾದ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್ ಐ ಪರವಾಗಿ ಕೆಲಸ ಮಾಡುತ್ತಿರುವ ಪ್ರತ್ಯೇಕತಾವಾದಿಗಳಿಗೆ ನೀಡಲಾಗಿರುವ ಭದ್ರತೆಯನ್ನು ಹಿಂಪಡೆಯಲು ಸರ್ಕಾರ ಯೋಚನೆ ಮಾಡುತ್ತಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಶುಕ್ರವಾರ ತಿಳಿಸಿದ್ದರು.

ಪಾಕಿಸ್ತಾನ ಹಾಗೂ ಐಎಸ್ ಐಯಿಂದ ಹಣವನ್ನು ತೆಗೆದುಕೊಳ್ಳುವ ಅಂಶಗಳು ಕೇಳಿಬಂದಿದ್ದು, ಭದ್ರತೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಾಜನಾಥ್ ಸಿಂಗ್ ಹೇಳಿದ್ದರು.

ಪಾಕಿಸ್ತಾನದ ಐಎಸ್ ಐ ಹಾಗೂ ಉಗ್ರ ಸಂಘಟನೆಗಳೊಂದಿಗೆ ಜಮ್ಮ- ಕಾಶ್ಮೀರದಲ್ಲಿನ ಕೆಲವರು ಸಂಪರ್ಕದಲ್ಲಿರುವ ಅಂಶ ತಿಳಿದುಬಂದಿದೆ. ಆದರೆ, ಅವರ ಯೋಜನೆಯನ್ನು ಸರ್ಕಾರ ಬುಡಮೇಲು ಮಾಡಲಿದೆ ಎಂದು ಅವರು ಹೇಳಿದ್ದರು.

ಇಂತಹ ಜನರು ಜಮ್ಮು- ಕಾಶ್ಮೀರದಲ್ಲಿನ ಜನರು ಹಾಗೂ ಯುವಕರ ಭವಿಷ್ಯದ ಜೊತೆಗೆ ಆಟವಾಡುತ್ತಿದ್ದಾರೆ. ಉಗ್ರರ ವಿರುದ್ಧ ನಮ್ಮ ಹೋರಾಟ ಮುಂದುವರೆಯಲಿದ್ದು, ಅದರಲ್ಲಿ ನಾವುಗಳು ಜಯಗಳಿಸುವ ವಿಶ್ವಾಸ ಇರುವುದಾಗಿ ರಾಜನಾಥ್ ಸಿಂಗ್ ತಿಳಿಸಿದ್ದರು.

Comments are closed.