ರಾಷ್ಟ್ರೀಯ

ಪುಲ್ವಾಮ ದಾಳಿಯಲ್ಲಿ ಕೊನೆ ಉಸಿರಿರುವವರೆಗೂ ಗುಂಡು ಹಾರಿಸಿ ಹುತಾತ್ಮರಾದ ಯೋಧರು!

Pinterest LinkedIn Tumblr


ನವದೆಹಲಿ: ಭಾರತೀಯ ಯೋಧರು ಸಾವಿಗೆ ಬೆನ್ನು ತೋರಿದ್ದೆ ಇಲ್ಲ. ಪುಲ್ವಾಮಾದಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಮ್ಮ ಕೊನೆಯ ಉಸಿರಿನವರೆಗೂ ಬಂದೂಕಿನ ಟ್ರಿಗರ್ ಒತ್ತುತ್ತಲೇ ಪ್ರಾಣ ಬಿಟ್ಟಿದ್ದಾರೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ತೀವ್ರ ಸುಟ್ಟು ಗಾಯಗಳಾಗಿದ್ದರು ಕೆಲ ಯೋಧರು ತಮ್ಮ ರೈಫಲ್ ಹಿಡಿದು ಕೆಲ ಸುತ್ತು ಗುಂಡು ಹಾರಿಸಿ, ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟ ಯೋಧರಲ್ಲಿ ಅನೇಕರ ಕೈ ಬೆರಳುಗಳು ರೈಫಲ್ ನ ಟ್ರಿಗರ್ ನಲ್ಲಿದ್ದವು. ರಣ ಹೇಡಿಗಳಂತೆ ಆಕ್ರಮಣ ಮಾಡಿರುವ ಉಗ್ರರ ವಿರುದ್ಧ, ಹೋರಾಡಿಯೇ ಪ್ರಾಣ ಬಿಟ್ಟಿದ್ದಾರೆ.
ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರ ಅದಿಲ್ ಅಹ್ಮದ್ ದಾರ್ ಎಸ್ ಯುವಿ ವಾಹನದಲ್ಲಿ ತುಂಬಿದ್ದ 300 ಕೆಜಿ ಸ್ಫೋಟಕದೊಂದಿಗೆ ಸಿಆರ್ಪಿಎಫ್ ಯೋಧರನ್ನು ಒಯ್ಯುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆಸಿದ್ದಾನೆ. ಪರಿಣಾಮ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ.

Comments are closed.