
ಜಗತ್ತಿನ ಬೆಸ್ಟ್ ಟಾಯ್ಲೆಟ್ ಪೇಪರ್ ಯಾವುದು ಅಂತ ಗೂಗಲ್‌ನಲ್ಲಿ ಇಮೇಜ್ ಸರ್ಚ್ ಮಾಡಿದಾಗ ಯಾವುದಾದರೂ ಟಾಯ್ಲೆಟ್ ಪೇಪರ್ ಕಂಪನಿಯ ಫೋಟೋ, ಜಾಹೀರಾತು ಬರುತ್ತೆ ಎಂದು ನೀವು ಭಾವಿಸಿದರೆ ತಪ್ಪಾದೀತು!
ಹೌದು, ಕಳೆದ 2 ದಿನಗಳಿಂದ Best Toilet Paper In the World (ಜಗತ್ತಿನ ಬೆಸ್ಟ್ ಟಾಯ್ಲೆಟ್ ಪೇಪರ್ ) ಎಂದು ಗೂಗಲ್‌ನಲ್ಲಿ ಹುಡುಕಿದರೆ ನಿಮ್ಮ ಸ್ಕ್ರೀನ್‌ನಲ್ಲಿ ಕಾಣಸಿಗುವುದು ಪಾಕಿಸ್ತಾನದ ಧ್ವಜ!
ಪಾಕಿಸ್ತಾನ ಬೆಂಬಲಿತ ಉಗ್ರ ಸಂಘಟನೆಯು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ 44 ಯೋಧರನ್ನು ಬಲಿ ಪಡೆದ ಬೆನ್ನಲ್ಲೇ ಈ ಬೆಳವಣಿಗೆ ಘಟಿಸಿದೆ.
ದಾಳಿಯ ಹಿನ್ನೆಲೆಯಲ್ಲಿ ಭಾರತ ಹಾಗೂ ಜಗತ್ತಿನಾದ್ಯಂತ ಪಾಕಿಸ್ತಾನದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ನೆಟಿಜನ್ ಗಳು ಈ ಮೂಲಕ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಈ ಹಿಂದೆ, ಈಡಿಯಟ್ (idiot) ಎಂದು ಗೂಗಲ್‌ನಲ್ಲಿ ಇಮೇಜ್ ಸರ್ಚ್ ಮಾಡಿದಾಗ ಡೊನಾಲ್ಡ್ ಟ್ರಂಪ್ ಫೋಟೋ ತೋರಿಸಿರುವುದು ವಿವಾದಕ್ಕೆ ಕಾರಣವಾಗಿತ್ತು.
Comments are closed.