ರಾಷ್ಟ್ರೀಯ

ಭೂಮಿಯ ಮೇಲ್ಮೈ ಹಸಿರಿಗೆ ನಮ್ಮ ದೇಶ ಹಾಗೂ ಚೀನಾ ಕಾರಣ ಹೇಗೆ ಗೊತ್ತಾ?

Pinterest LinkedIn Tumblr


ನವದೆಹಲಿ: ಜಾಗತೀಕ ದಕ್ಷಿಣದ ದೇಶಗಳು ಭೂಮಿ ಒಣಗಲು ಕಾರಣ ಎಂದು ದೂರುತ್ತಿದ್ದ ಪಾಶ್ಚಿಮಾತ್ಯ ದೇಶಗಳ ಮಾತು ಸುಳ್ಳಾಗಿದೆ. ಹೌದು ಇತ್ತೀಚಿಗೆ ನಾಸಾದ ಉಪಗ್ರಹಗಳು ಈ ವಾದವನ್ನು ಸುಳ್ಳು ಮಾಡಿವೆ.

ಈ ಉಪಗ್ರಹಗಳಲ್ಲಿ ಈಗ ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅಗ್ರಮಾನ್ಯ ದೇಶಗಳಾದ ಚೀನಾ ಮತ್ತು ಭಾರತ ದೇಶಗಳು ಭೂಮಿಯ ಮೇಲ್ಮೆ ಪ್ರಮಾಣವನ್ನು ಹೆಚ್ಚಿಸುವಲ್ಲಿ ಅಧಿಕ ಪ್ರಮಾಣದ ಪಾತ್ರವನ್ನು ವಹಿಸಿವೆ ಎನ್ನುವ ಸಂಗತಿ ಈಗ ತಿಳಿದುಬಂದಿದೆ. ಇದು ಭೂಮಿ 20 ವರ್ಷದ ಹಿಂದೆ ಇದ್ದ ಹಸಿರಿನ ಪ್ರಮಾಣಕ್ಕಿಂತಲೂ ಅಧಿಕ ಎನ್ನಲಾಗುತ್ತಿದೆ.

ನೇಚರ್ ಸಷ್ಟೇನೆಬಿಲಿಟಿ ಎನ್ನುವ ಜರ್ನಲ್ ನಲ್ಲಿ ನಾಸಾ ವಿಜ್ಞಾನಿಗಳು ಈ ಅಂಶವನ್ನು ವಿವರಿಸಿದ್ದಾರೆ. ಈ ಅಧ್ಯಯನದಲ್ಲಿ ಜಾಗತೀಕವಾಗಿ ಶೇ.5 ರಷ್ಟು ಹಸಿರು ಪ್ರಮಾಣ ಹೆಚ್ಚಳವಾಗಿದೆ.ಈ ಹಸಿರಿನ ಪ್ರಮಾಣ ಅಮೆಜಾನ್ ಕಾಡಿನ ಸರಿಸಮ ಎಂದು ತಿಳಿಸಿದ್ದಾರೆ. ಪ್ರಮುಖವಾಗಿ 2000 ಮತ್ತು 2017 ರರಲ್ಲಿನ ನಕ್ಷೆಗಳನ್ನು ಪರಿಶೀಲಿಸಿದಾಗ ಈ ಅಂಶ ತಿಳಿದುಬಂದಿದೆ ಎಂದು ಅಧ್ಯಯನ ಹೇಳಿದೆ.

Comments are closed.