ರಾಷ್ಟ್ರೀಯ

‘ಭಾರತ ರತ್ನ’ ಗೌರವ ನಿರಾಕರಿಸಿದ ಅಸ್ಸಾಂ ಗಾಯಕ ಭೂಪೇನ್​ ಹಜಾರಿಕಾ ಕುಟುಂಬ

Pinterest LinkedIn Tumblr


ನವದೆಹಲಿ: ನಾಗರಿಕ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಮರಣೋತ್ತರವಾಗಿ ಗಾಯಕ ಭೂಪೇನ್​ ಹಜಾರಿಕಾ ಅವರಿಗೆ ಕೇಂದ್ರ ಸರ್ಕಾರ ನೀಡಿದ್ದ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನವನ್ನು ಹಜಾರಿಕಾ ಕುಟುಂಬ ನಿರಾಕರಿಸಿದೆ.

ಕಳೆದ ಜನವರಿ 26ರಂದು ಕೇಂದ್ರ ಸರ್ಕಾರ ಭೂಪೇನ್​ ಹಜಾರಿಕಾ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಹೆಸರನ್ನು ಘೋಷಿಸಿತ್ತು. ಇದೀಗ ಗೌರವವನ್ನು ಹಜಾರಿಕಾ ಕುಟುಂಬ ನಿರಾಕರಿಸಿರುವುದು ಪ್ರಧಾನಿ ಮೋದಿ ಅವರಿಗೆ ದೊಡ್ಡ ಹಿನ್ನಡೆಯಾಗಿದೆ.
ಅಮೆರಿಕದಲ್ಲಿ ನೆಲೆಸಿರುವ ಹಜಾರಿಕಾ ಅವರ ಮಗ ತೇಜ್​, ಇಂದು ಅಸ್ಸಾಂ ಸ್ಥಳೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ಪ್ರಸ್ತುತ ರಾಜ್ಯದ ವಿದ್ಯಮಾನಗಳಿಂದ ಭಾರತ ರತ್ನ ಪ್ರಶಸ್ತಿಯನ್ನು ನಿರಾಕರಿಸುತ್ತಿರುವುದಾಗಿ ತಿಳಿಸಿದ್ದಾರೆ.

ಪ್ರಶಸ್ತಿ ಘೋಷಣೆಯಾದ ಸಂದರ್ಭದಲ್ಲಿ ತೇಜ್​ ಅವರು ವೈವಿಧ್ಯತೆಗೆ ಸಿಕ್ಕ ಗೆಲುವು ಎಂದು ಹೇಳಿದ್ದರು. ತೇಜ್​ ಅವರು ಲೇಖಕ ಮತ್ತು ಪಬ್ಲಿಷರ್​ ಆಗಿದ್ದು, ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ.

Comments are closed.