ರಾಷ್ಟ್ರೀಯ

ತೃಣಮೂಲ ಕಾಂಗ್ರೆಸ್​ ಶಾಸಕ ಸತ್ಯಜಿತ್​ ಬಿಸ್ವಾಸ್ ಗುಂಡಿಕ್ಕಿ​ ಹತ್ಯೆ!

Pinterest LinkedIn Tumblr


ನವದೆಹಲಿ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ ಕೃಷ್ಣಗುಂಜ್​ನಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್​ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಕೋಲ್ಕತ್ತದಿಂದ 120 ಕಿ.ಮೀ.ದೂರದಲ್ಲಿರುವ ನಾಡಿಯಾ ಜಿಲ್ಲೆಯ ಕೃಷ್ಣಗಂಜ್​ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಿಸ್ವಾಸ್​ ಪಾಲ್ಕೊಂಡಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಬಿಸ್ವಾಸ್​ ಅವರಿಗೆ ಗುಂಡು ಹಾರಿಸಲಾಗಿದೆ.

ನಾಡಿಯಾ ಜಿಲ್ಲೆ ಬಾಂಗ್ಲಾದೇಶ ಗಡಿಯಲ್ಲಿದೆ. ಮತ್ತು ಇತ್ತೀಚೆಗೆ ಈ ಭಾಗವನ್ನು ಬಿಜೆಪಿ ರಾಜಕೀಯವಾಗಿ ಅತಿಕ್ರಮಿಸಿಕೊಂಡಿದೆ. ಸತ್ಯಜಿತ್ ಬಿಸ್ವಾಸ್​ ಮಾಥುರ್ ಸಮುದಾಯಕ್ಕೆ ಸೇರಿದವರು. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಬಿಸ್ವಾಸ್​ ಶಾಸಕರಾಗಿದ್ದರು. ಇದೊಂದು ರಾಜಕೀಯಪ್ರೇರಿತ ಕೊಲೆ ಎಂದು ಟಿಎಂಸಿ ಪಕ್ಷ ಆರೋಪ ಮಾಡಿದೆ.

ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಶಾಸಕನನ್ನು ಕೊಂದ ಬಳಿಕ ಅಲ್ಲಿ ನೆರೆದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಆರೋಪಿ ಹುಡುಕಾಟ ನಡೆದಿದೆ. ಕಾರ್ಯಕ್ರಮದ ವೇದಿಕೆ ಬಳಿಗೆ ಶಾಸಕ ಬಿಸ್ವಾಸ್​ ಹತ್ತಿರವಾಗುತ್ತಿದಂತೆ ಕೊಲೆಗಾರ ಹಲವು ಸುತ್ತು ಗುಂಡು ಹಾರಿಸುವ ಮೂಲಕ ಶಾಸಕರನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುವ ವೇಳೆ 37 ವರ್ಷದ ಬಿಸ್ವಾಸ್​ ಜೊತೆಗೆ ಸಚಿವರಾದ ರತ್ನ ಘೋಷ್ ಮತ್ತು ಟಿಎಂಸಿ ಪಕ್ಷದ ಜಿಲ್ಲಾಧ್ಯಕ್ಷ ಗೌರಿಶಂಕರ್​ ದತ್ ಜೊತೆಗಿದ್ದರು.​ ಇತ್ತೀಚೆಗಷ್ಟೇ ಶಾಸಕ ಬಿಸ್ವಾಸ್​ ಮದುವೆಯಾಗಿದ್ದರು.

Comments are closed.