ರಾಷ್ಟ್ರೀಯ

ಲೋಕಸಭೆ ಚುನಾವಣೆಗೆ ಸುಳ್ಳುಸುದ್ದಿ ಹರಡಲು ರಾಜಕೀಯ ಪಕ್ಷಗಳಿಂದ ವಾಟ್ಸಾಪ್​ ದುರ್ಬಳಕೆ;​ ಕಂಪನಿ ಆರೋಪ

Pinterest LinkedIn Tumblr


ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನು ಕೆಲವು ತಿಂಗಳು ಬಾಕಿಯಿರುವಂತೆ ರಾಜಕೀಯ ಪಕ್ಷಗಳು ವಾಟ್ಸಾಪ್​ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಈ ಬಗ್ಗೆ ಮಾತನಾಡಿರುವ ಕಂಪನಿಯ ಹಿರಿಯ ಅಧಿಕಾರಿ ವಾಟ್ಸಾಪ್​ಅನ್ನು ಈ ರೀತಿಯಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಯಾವ ಪಕ್ಷಗಳು ವಾಟ್ಸಾಪ್​ನಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿವೆ ಎಂದು ಹೇಳಲು ಫೇಸ್​ಬುಕ್​ ಸಹಸಂಸ್ಥೆಯಾದ ವಾಟ್ಸಾಪ್​ ನಿರಾಕರಿಸಿದೆ. ಆದರೆ, ಪಕ್ಷಗಳ ಕಾರ್ಯಕರ್ತರು ವಾಟ್ಸಾಪ್​ ಮೂಲಕ ಸುಳ್ಳುಸುದ್ದಿಗಳನ್ನು ಮತದಾರರಿಗೆ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಆಡಳಿತರೂಢ ಪಕ್ಷವಾದ ಬಿಜೆಪಿ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್​ ಕಾರ್ಯಕರ್ತರು ಸುಳ್ಳುಸುದ್ದಿಗಳ ಮೂಲಕ ತಮ್ಮ ಸಿದ್ಧಾಂತ ಪ್ರಚಾರ ಮಾಡಲು ಮೆಸೆಜಿಂಗ್​ ಆ್ಯಪ್​ಅನ್ನು ಪ್ರಮುಖ ಸಾಧನವಾಗಿ ಬಳಸಿಕೊಳ್ಳುತ್ತಿದ್ದಾರೆ.

ಹಲವು ಪಕ್ಷಗಳು ವಾಸ್ತವವನ್ನು ಮರೆಮಾಚಿ ವಾಟ್ಸಾಪ್​ನಲ್ಲಿ ಸುಳ್ಳುಸುದ್ದಿಯನ್ನು ಪ್ರಸಾರ ಮಾಡಲು ಉಪಯೋಗಿಸಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ. ಮುಂದೆ ಇದು ಹೀಗೆಯೇ ಮುಂದುವರೆದರೆ ಇದರ ಪರಿಣಾಮ ನಮ್ಮ ಸೇವೆಯನ್ನು ರದ್ದುಗೊಳಿಸಬೇಕಾಗುತ್ತದೆ ಎಂದು ಕಂಪನಿಯ ಸಂವಹನ ವಿಭಾಗದ ಮುಖ್ಯಸ್ಥ ಕಾರ್ಲ್ ವಾಗ್​ ಎಚ್ಚರಿಕೆ ನೀಡಿದ್ದಾರೆ.

ಇದು ಕೇವಲ ಭಾರತದಲ್ಲಿ ಮಾತ್ರವಷ್ಟೇ ಸವಾಲಾಗಿಲ್ಲ. ಮುಂದಿನ ಅಕ್ಟೋಬರ್​ನಲ್ಲಿ ಬ್ರೆಜಿಲ್​ನಲ್ಲಿ ನಡೆಯುವ ಚುನಾವಣೆಯಲ್ಲೂ ಸುಳ್ಳು ಸುದ್ಧಿ, ಪಕ್ಷಗಳ ಸಿದ್ಧಾಂತಗಳನ್ನು ಹಂಚಲು ವಾಟ್ಸಾಪ್​ಅನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಇದು ರಾಜಕೀಯ ಚರ್ಚೆಯನ್ನೇ ವಿರೂಪಗೊಳಿಸುತ್ತಿದೆ.

ವಾಟ್ಸಾಪ್​ ಬಳಕೆದಾರರಲ್ಲಿ ಭಾರತ ಅತಿದೊಡ್ಡ ಮಾರುಕಟ್ಟೆ. ಇಲ್ಲಿ ಸುಮಾರು 20 ಕೋಟಿ ಜನರು ವಾಟ್ಸಾಪ್​ ಬಳಕೆದಾರರಿದ್ದಾರೆ. ಕಳೆದ ಡಿಸೆಂಬರ್​ನಲ್ಲಿ ನಡೆದ ರಾಜಸ್ಥಾನ, ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರು ರಾಯಿಟರ್ಸ್​ ವರದಿಗಾರನನ್ನು 12 ಹೆಚ್ಚು ವಾಟ್ಸಾಪ್​ ಪ್ರಚಾರದ ಗ್ರೂಪ್​ಗಳಲ್ಲಿ ಸೇರಿಸಿಕೊಂಡಿದ್ದರು.

ಚುನಾವಣೆಯಲ್ಲಿ ವಾಟ್ಸಾಪ್​ ದುರುಪಯೋಗ ಆಗುತ್ತಿರುವುದನ್ನು ನಾವು ಒಪ್ಪಿಕೊಳ್ಳುತ್ತಿದ್ದೇವೆ. ಆದರೆ, ಅಂತಹವುಗಳನ್ನು ಪತ್ತೆಹಚ್ಚಲು ಕಾರ್ಯೋನ್ಮುಖರಾಗುತ್ತೇವೆ. ಮತ್ತು ಶೀಘ್ರದಲ್ಲೇ ಸಾಧ್ಯವಾದಷ್ಟು ಮಟ್ಟಿಗೆ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ವಾಗ್​ ಹೇಳಿದ್ದಾರೆ.

ಬಿಜೆಪಿ ಐಟಿ ಮುಖ್ಯಸ್ಥ ಅಮಿತ್​ ಮಾಳವಿಯಾ ಮಾತನಾಡಿ, ಅವರು ವಾಟ್ಸಾಪ್​ ಪ್ರತಿನಿಧಿಗಳನ್ನು ಭೇಟಿಯಾಗಿಲ್ಲ ಎಂದು ಹೇಳಿ ಹೆಚ್ಚಿನ ವಿಚಾರ ಹೇಳಲು ನಿರಾಕರಿಸಿದರು.

ಕಾಂಗ್ರೆಸ್​ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಮಾತನಾಡಿ, ಪಕ್ಷವೂ ವಾಟ್ಸಾಪ್​ಅನ್ನು ದುರುಪಯೋಗ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಿದರು.

ಸುಳ್ಳು ಸಂದೇಶಗಳನ್ನು ಹಬ್ಬಿಸಿದ ಪರಿಣಾಮ ಗುಂಪು ಘರ್ಷಣೆ ಸಂಭವಿಸುತ್ತಿರುವ ಬಗ್ಗೆ ಕಳೆದ ವರ್ಷ ಕೇಂದ್ರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿತ್ತು.

ಜಾಗತಿಕವಾಗಿ 1.5 ಬಿಲಿಯನ್​ ವಾಟ್ಸಾಪ್​ ಬಳಕೆದಾರರಿದ್ದಾರೆ. ಗುಂಪು ಮತ್ತು ಸ್ವಯಂಚಾಲಿತ ಸಂದೇಶ ಕಳುಹಿಸುವ 20 ಲಕ್ಷ ವಾಟ್ಸಾಪ್​ ಗ್ರೂಪ್​ಗಳನ್ನು ಪ್ರತಿ ತಿಂಗಳು ರದ್ದು ಮಾಡಲಾಗುತ್ತಿದೆ ಎಂದು ವಾಗ್​ ಬುಧವಾರ ತಿಳಿಸಿದರು. ಆದರೆ, ಭಾರತದಲ್ಲಿ ಎಷ್ಟು ಅಕೌಂಟ್​ಗಳನ್ನು ರದ್ದು ಮಾಡಲಾಗಿದೆ ಎಂಬುದನ್ನು ಅವರು ಹೇಳಲಿಲ್ಲ.

Comments are closed.