ರಾಷ್ಟ್ರೀಯ

ಯೋಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ನಿರಾಕರಿಸಿದ ಮಮತಾ ಸರ್ಕಾರ

Pinterest LinkedIn Tumblr


ನವದೆಹಲಿ: ಪಶ್ಚಿಮ ಬಂಗಾಳದ ಮಮತಾ ನೇತೃತ್ವದ ಸರ್ಕಾರ ಭಾನುವಾರದಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ನಿರಾಕರಿಸಿದೆ.

ಸಿಎಂ ಯೋಗಿ ಇಂದು ಉತ್ತರ ಬಂಗಾಳದ ರಾಯಗಂಜ್ ಮತ್ತು ಬಾಳುರ್ ಘಾಟ್ ನಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಭಾಗವಹಿಸಬೇಕಾಗಿತ್ತು ,ಆದರೆ ಸಿಎಂ ಯೋಗಿ ರ್ಯಾಲಿಗೆ ಯಾವುದೇ ಮುನ್ಸೂಚನೆ ಕೊಡದೆ ಮಮತಾ ಬ್ಯಾನರ್ಜೀ ಸರ್ಕಾರ ರ್ಯಾಲಿಗೆ ಅವಕಾಶವನ್ನು ನಿರಾಕರಿಸಿದೆ.

ಸಿಎಂ ಯೋಗಿ ಮಾಹಿತಿ ಸಲಹೆಗಾರ ಮೃತ್ಯುಂಜಯ ಕುಮಾರ್ ಈಗ ಪ.ಬಂಗಾಳದ ಮುಖ್ಯಮಂತ್ರಿ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. “ಉತ್ತರ ಪ್ರದೇಶದ ಮುಖ್ಯಮಂತ್ರಿ ಜನಪ್ರಿಯತೆ ಕಾರಣದಿಂದಾಗಿ ಮಮತಾ ಬ್ಯಾನರ್ಜೀಯವರು ಸಿಎಂ ಯೋಗಿ ಹೆಲಿಕ್ಯಾಪ್ಟರ್ ಇಳಿಯಲಿಕ್ಕೆ ಅವಕಾಶ ನೀಡಿಲ್ಲ” ಎಂದು ಕಿಡಿಕಾರಿದ್ದಾರೆ.

ಈ ಹಿಂದೆ ಅಮಿತ್ ಷಾ ಅವರ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ಗೆ ಅವಕಾಶವನ್ನು ನಿರಾಕರಿಸಲಾಗಿದ್ದನ್ನು ನಾವು ಕಾಣಬಹುದು.

Comments are closed.