ರಾಷ್ಟ್ರೀಯ

ಪೊಲೀಸರಿಂದ ಸಿಬಿಐ ಅಧಿಕಾರಿಗಳ ಬಂಧನ!

Pinterest LinkedIn Tumblr


ಕೋಲ್ಕತಾ: ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಸಿಬಿಐ ತಂಡ ಪೋಲಿಸ್ ಕಮಿಷನರ್ ರಾಜೀವ್ ಕುಮಾರ್ ಅವರ ನಿವಾಸಕ್ಕೆ ಆಗಮಿಸಿದೆ. ಆದರೆ ಆಗಮಿಸಿದ್ದ ಐದು ಸಿಬಿಐ ಅಧಿಕಾರಿಗಳನ್ನೇ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದ ವಿಚಾರಣೆಗೆ ಸಿಬಿಐ ಅಧಿಕಾರಿಗಳು ಆಗಮಿಸಿದ್ದದರು. ಇನ್ನೊಂದು ಕಡೆ ಸಿಎಂ ಮಮತಾ ಬ್ಯಾನರ್ಜಿ ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ.ನಿರಂತರವಾಗಿ ರಾಜಕಾರಣ ಮತ್ತು ಅಧಿಕಾರಿ ವರ್ಗದ ಸಭೆ ಸಹ ನಡೆಯುತ್ತಿದೆ.

ಪಶ್ಚಿಮ ಬಂಗಾಳದ ಈ ಪ್ರಕರಣ ಕೇಂದ್ರ ವರ್ಸಸ್ ಪಶ್ಚಿಮ ಬಂಗಾಳ ಆಗಿ ಬದಲಾದರೂ ಅಚ್ಚರಿ ಇಲ್ಲ. ರಾಜೀವ್ ಕುಮಾರ್ ಅವರನ್ನು ಹುಡುಕಿಕೊಂಡು ಬರಲಾಗಿತ್ತು ಎಂದು ಹೇಳಲಾಗಿದೆ. ಒಟ್ಟಿನಲ್ಲಿ ಎರಡು ಇಲಾಖೆಗಳ ನಡುವಿನ ಕಿತ್ತಾಟ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ.

Comments are closed.