ರಾಷ್ಟ್ರೀಯ

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’

Pinterest LinkedIn Tumblr


ನವದೆಹಲಿ: ಮಧ್ಯಂತರ ಬಜೆಟ್ ನಲ್ಲಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣೆ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ವಿತ್ತ ಸಚಿವ ಪಿಯೂಷ್ ಗೋಯಲ್ ಘೋಷಿಸಿದರು.

‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’
ಅಸಂಘಟಿತ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’ ಪಿಂಚಣಿ ಯೋಜನೆಯನ್ನು ಘೋಷಿಸಲಾಗಿದೆ.

ಅಸಂಘಟಿತ ವಲಯದ ನೌಕರರು ತಿಂಗಳಿಗೆ 100 ರೂ. ಕಟ್ಟುವ ಮೂಲಕ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಂಧಾನ್’ ಪಿಂಚಣಿ ಯೋಜನೆಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಈ ರೀತಿ ಹೆಸರು ನೊಂದಾಯಿಸಿಕೊಂಡವರಿಗೆ 60 ವರ್ಷ ವಯಸ್ಸಾದ ಬಳಿಕ ತಿಂಗಳಿಗೆ 3000 ರೂ. ಪಿಂಚಣಿ ದೊರೆಯಲಿದೆ ಎಂದು ವಿತ್ತ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.

Comments are closed.