ರಾಷ್ಟ್ರೀಯ

ಮುಂದಿನ 10 ವರ್ಷಗಳಿಗೆ ಮೋದಿ ಸರಕಾರದ 10 ಆಯಾಮಗಳು

Pinterest LinkedIn Tumblr


ನವದೆಹಲಿ: ರೈತರಿಗೆ ಬಂಪರ್ ಆಫರ್, ಮಧ್ಯಮವರ್ಗದವರಿಗೆ ಟ್ಯಾಕ್ಸ್ ರಿಲೀಫ್ ಇತ್ಯಾದಿ ಜನಪ್ರಿಯ ಘೋಷಣೆಗಳ ಜೊತೆಗೆ ಈ ಬಾರಿಯ ಬಜೆಟ್​ನಲ್ಲಿ ವ್ಯಕ್ತವಾದ ಮತ್ತೊಂದು ಪ್ರಮುಖ ವಿಚಾರವೆಂದರೆ ಅದು ವಿಷನ್ 2030. ಮುಂದಿನ ಹತ್ತು ವರ್ಷದಲ್ಲಿ ಭಾರತ ಯಾವೆಲ್ಲಾ ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಹರಿಸಲಿದೆ ಎಂಬುದನ್ನು ಹಣಕಾಸು ಸಚಿವ ಪಿಯೂಶ್ ಗೋಯೆಲ್ ವಿವರಿಸಿದರು. ಭಾರತದ ಭವಿಷ್ಯದ 10 ಆಯಾಮಗಳನ್ನ ತೆರೆದಿಟ್ಟ ಹಣಕಾಸು ಸಚಿವರು, ಆಧುನಿಕ ಸಮಾಜ ನಿರ್ಮಾಣಕ್ಕೆ ಈ ಆಯಾಮಗಳು ನೆರವಾಗಲಿವೆ ಎಂದು ತಿಳಿಸಿದರು.

ಹತ್ತು ಆಯಾಮಗಳು:

1) ಸುಲಭ ಜೀವನಕ್ಕಾಗಿ ರಸ್ತೆ, ರೈಲ್ವೆ, ಬಂದರು, ವಿಮಾನ ನಿಲ್ದಾಣ, ಒಳನಾಡು ಜಲಮಾರ್ಗ ಇತ್ಯಾದಿ ಇರುವ ಎಲ್ಲಾ ವಲಯಗಳಲ್ಲಿ ಅತ್ಯಾಧುನಿಕ (ಮುಂದಿನ ಪೀಳಿಗೆಯ ತಂತ್ರಜ್ಞಾನ) ಮುಲಭೂತ ಸೌಕರ್ಯ ರೂಪಿಸುವುದು.

2) ಅರ್ಥವ್ಯವಸ್ಥೆಯ ಮೂಲೆಮೂಲೆಯನ್ನೂ ಸ್ಪರ್ಶಿಸಬಲ್ಲಂಥ ಹಾಗೂ ದೇಶದ ಪ್ರತಿಯೊಬ್ಬ ನಾಗರಿಕನನ್ನೂ ತಲುಪುವಂಥ ಡಿಜಿಟಲ್ ಇಂಡಿಯಾ ನಿರ್ಮಾಣ.

3) ಸ್ವಚ್ಛ ಮತ್ತು ಹಸಿರು ಭಾರತ – ಸಂಪೂರ್ಣ ಎಲೆಕ್ಟ್ರಿಕ್ ಅಥವಾ ವಿದ್ಯುತ್ ಚಾಲಿತ ವಾಹನಗಳ ಗುರಿ; ಮರುನವೀಕರಣ ಇಂಧನ; ಇಂಧನ ಆಮದಿಗೆ ಕಡಿವಾಣ ಹಾಗೂ ದೇಶದ ಪ್ರತಿಯೊಬ್ಬರಿಗೂ ಹೆಚ್ಚು ಇಂಧನ ಶಕ್ತಿ ಪೂರೈಕೆ.

4) ಅತ್ಯಾಧುನಿಕ ಔದ್ಯಮಿಕ ತಂತ್ರಜ್ಞಾನಗಳ ಮೂಲಕ ಗ್ರಾಮೀಣ ಔದ್ಯಮೀಕರಣಕ್ಕೆ ಪುಷ್ಟಿ: ಮೇಕ್ ಇನ್ ಇಂಡಿಯಾ ಯೋಜನೆ ಮಾದರಿಯಲ್ಲಿ ದೇಶಾದ್ಯಂತ ಕೆಳಹಂತದ ಸಣ್ಣ ವ್ಯವಹಾರಗಳು ಹಾಗೂ ಸ್ಟಾರ್ಟಪ್​ಗಳಿಗೆ ಉತ್ತೇಜನ ಕೊಡುವುದು ಇದರ ಒಂದು ಭಾಗ. ಹಲವು ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ತಯಾರಿಕಾ ಕೇಂದ್ರವಾಗುವತ್ತ ಸಾಗಿದೆ.

5) ಸ್ವಚ್ಛ ನದಿಗಳು: ಕಿರು ನೀರಾವರಿ ತಂತ್ರಗಳ ಮೂಲಕ ಪ್ರತಿಯೊಬ್ಬ ಭಾರತೀಯರಿಗೂ ಸುರಕ್ಷಿತ ಕುಡಿಯುವ ನೀರಿನ ವ್ಯವಸ್ಥೆ.

6) ಸಾಗರ ಮತ್ತು ಕರಾವಳಿ ಭಾಗಗಳ ಅಭಿವೃದ್ಧಿ

7) 2022ರಷ್ಟರಲ್ಲಿ ಭಾರತೀಯ ಗಗನಯಾನಿಯನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು.

8) ಆಹಾರದಲ್ಲಿ ಸ್ವಾವಲಂಬನೆ ಸಾಧಿಸುವುದು, ಕೃಷಿ ಉತ್ಪನ್ನಶೀಲತೆ ಹೆಚ್ಚಿಸುವುದು ಹಾಗೂ ಸಾವಯವ ಕೃಷಿ ಆಹಾರಕ್ಕೆ ಒತ್ತು ನೀಡುವುದು.

9) ಆರೋಗ್ಯ ಭಾರತ – ಪ್ರತಿಯೊಬ್ಬ ವ್ಯಕ್ತಿಗೂ ಒತ್ತಡ ರಹಿತ ಜೀವನ ವ್ಯವಸ್ಥೆ ಹಾಗೂ ಸಮಗ್ರ ಶುಶ್ರೂಷಣಾ ವ್ಯವಸ್ಥೆ.

10) ಕನಿಷ್ಠ ಸರಕಾರ, ಗರಿಷ್ಠ ಆಡಳಿತ: ವಿದ್ಯುನ್ಮಾನ ಮೂಲಕ ಆಡಳಿತ ಹಾಗೂ ಅಧಿಕಾರಷಾಹಿಯ ಕಾರ್ಯಕ್ಷಮತೆಯಲ್ಲಿ ಹೆಚ್ಚಳ.

Comments are closed.