ರಾಷ್ಟ್ರೀಯ

ಬಜೆಟ್​ ಕುರಿತು ಪ್ರತಿಕ್ರಿಯೆ ನೀಡುತ್ತಿದ್ದ ಕೇಂದ್ರ ಸಚಿವರ ಹಿಂದೆ ನಿಂತಿದ್ದ ಹುಡುಗಿ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ನವದೆಹಲಿ: ಇಂದು ಹಣಕಾಸು ರಾಜ್ಯ ಖಾತೆ ಸಚಿವ ಪಿಯೂಷ್​ ಗೋಯೆಲ್ ಮಂಡಿಸಿದ ಬಜೆಟ್​ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದ ಕೇಂದ್ರದ ನಾಗರಿಕ ಮತ್ತು ವೈಮಾನಿಕ ಖಾತೆ ರಾಜ್ಯ ಸಚಿವ ಜಯಂತ್​ ಸಿನ್ಹಾ ಅವರ ಹಿಂದೆ ನಿಂತಿದ್ದ ಹುಡುಗಿಯೊಬ್ಬಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ.

ಬಜೆಟ್​ ಸೆಷನ್​ ಮುಗಿದ ಬಳಿಕ ಸಂಸತ್​ನ ಎದುರು ಮಾಧ್ಯಮದವರು ಸಚಿವರು ಮತ್ತು ಸಂಸದರ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದರು. ಈ ವೇಳೆ ಸಚಿವ ಜಯಂತ್​ ಸಿನ್ಹಾ ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಆ ವೇಳೆ ಹಿಂದೆ ನಿಂತಿದ್ದ ಹುಡುಗಿಯೊಬ್ಬಳು ನಾಲಿಗೆಯನ್ನು ಹೊರಹಾಕಿ ಕ್ಯಾಮೆರಾಗೆ ಫೋಸ್​ ನೀಡಿದ್ದಾಳೆ. ಇದರಿಂದಾಗಿ ಜಯಂತ್​ ಸಿನ್ಹಾ ಮಾತುಗಳಿಗಿಂತ ಎಲ್ಲರ ಗಮನ ಆಕೆಯ ಮೇಲೇ ಹೋಗುವಂತಿದ್ದು, ಆ ಹುಡುಗಿ ಯಾರೆಂಬುದು ಗೊತ್ತಾಗಿಲ್ಲ.

ಈ ವಿಡಿಯೋ ಈಗ ವೈರಲ್ ಆಗಿದ್ದು, ‘ಯಾರಿದು ಫೋಟೋಬಾಂಬ್​?’ ಎಂದು ಸ್ಟೇಟಸ್​ ಹಾಕಿಕೊಂಡು ಸಾವಿರಾರು ಜನರು ಟ್ವಿಟ್ಟರ್​ನಲ್ಲಿ ಆ ವಿಡಿಯೋ ಶೇರ್​ ಮಾಡಿದ್ದಾರೆ. ಮೋದಿ ಸರ್ಕಾರ ಉತ್ತಮ ಬಜೆಟ್​ ನೀಡಿದೆ ಎಂದು ಅಭಿನಂದನೆ ಸಲ್ಲಿಸಿರುವ ಜಯಂತ್​ ಸಿನ್ಹಾ ಅವರ ವಿಡಿಯೋದಲ್ಲಿನ ಈ ಹುಡುಗಿಯ ಫೋಟೋ ಈಗ ಟ್ರೋಲ್ ಆಗುತ್ತಿದೆ. ಆಕೆಯ ಮುಖ ಮಾತ್ರ ಕಾಣುತ್ತಿದ್ದು, ಸಚಿವರ ಹಿಂದೆ ನಗುತ್ತಾ ನಿಂತಿರುವ ಆಕೆ ಯಾರೆಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ, ಆ ಹುಡುಗಿಯ ಕಾರಣಕ್ಕೆ ಈ ವಿಡಿಯೋ ಟ್ರೆಂಡ್​ ಆಗಿದೆ.

Comments are closed.