ರಾಷ್ಟ್ರೀಯ

ಟಾಟಾ ಬ್ರ್ಯಾಂಡ್ ಕೂಡಾ ವಿಶ್ವದ ಅಗ್ರಗಣ್ಯ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆ.

Pinterest LinkedIn Tumblr

ವಿಶ್ವದ ಟಾಪ್ 100 ಮೌಲ್ಯಯುತ ಜಾಗತಿಕ ಬ್ರ್ಯಾಂಡ್ ಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ದಾವೋಸ್ ನಲ್ಲಿ ನಡೆದ ವರ್ಲ್ಡ್ ಎಕಾನಾಮಿಕ್ ಫೋರಮ್ ನಲ್ಲಿ ಬ್ರ್ಯಾಂಡ್ ಫೈನಾನ್ಸ್ ಗ್ಲೋಬಲ್ 500 ಪ್ರಕಟಿಸಿದ 2019ರ ವರದಿಯಂತೆ ಟಾಟಾ ಬ್ರ್ಯಾಂಡ್ ಕೂಡಾ ವಿಶ್ವದ ಅಗ್ರಗಣ್ಯ 100 ಸಂಸ್ಥೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

ಕಳೆದ ಬಾರಿ 104ನೇ ಸ್ಥಾನದಲ್ಲಿದ್ದ ಟಾಟಾ ಬ್ರ್ಯಾಂಡ್ ಈ ಬಾರಿ 86ನೇ ಸ್ಥಾನಕ್ಕೇರಿದೆ. ಟಾಪ್ 100ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಬ್ರ್ಯಾಂಡ್ ಆಗಿದೆ.

2020ರಿಂದ ಟಾಟಾ ನ್ಯಾನೋ ಕಾರು ಉತ್ಪಾದನೆ ಬಂದ್

ಟಾಟಾ ಬ್ರ್ಯಾಂಡ್ ನ ಮೌಲ್ಯ ಪ್ರಸಕ್ತ ವರ್ಷದಲ್ಲಿ ಶೇ 37ರಷ್ಟು ಏರಿಕೆ ಕಂಡು 19.5 ಬಿಲಿಯನ್ ಡಾಲರ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 14.2 ಬಿಲಿಯನ್ ಡಾಲರ್ ನಷ್ಟಿತ್ತು.

ಟಾಟಾ ಕನ್ಸಲ್ಟನ್ಸಿ ಸರ್ವೀಸಸ್, ಟಾಟಾ ಮೋಟರ್ಸ್ ಹಾಗೂ ಟಾಟಾ ಸ್ಟೀಲ್ ಗಳ ಪ್ರಗತಿ ದರ ಹೆಚ್ಚಳವಾಗಿದ್ದರಿಂದ ಟಾಟಾ ಸಮೂಹದ ಬ್ರ್ಯಾಂಡ್ ಮೌಲ್ಯ ಕೂಡಾ ಏರಿಕೆ ಕಂಡಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ಹೇಳಿದೆ.
ನಮ್ಮ ಬ್ರ್ಯಾಂಡ್ ನ ಶಕ್ತಿಯನ್ನು ಜಾಗತಿಕವಾಗಿ ಗುರುತಿಸಿರುವುದು ಸಂತಸದ ತಂದಿದೆ. ವ್ಯಾಪಾರ, ವಹಿವಾಟಿನ ಜತೆಗೆ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತು ಸಂಸ್ಥೆ ಮುನ್ನಡೆಯುತ್ತಿದೆ. ಸುಧಾರಿತ ತಂತ್ರಜ್ಞಾನ ಅಳವಡಿಕೆ, ಉದ್ಯಮ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ತೋರುವಲ್ಲಿ ಟಾಟಾ ಸಂಸ್ಥೆ ಹಿಂದೆ ಬೀಳಲ್ಲ ಎಂದು ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಪ್ರತಿಕ್ರಿಯಿಸಿದ್ದಾರೆ.

Comments are closed.