ರಾಷ್ಟ್ರೀಯ

ಗಣತಂತ್ರ ದಿನ ದೇಶಾದ್ಯಂತದ ವಿಶಿಷ್ಟ ಸೇವೆ ಸಲ್ಲಿಸಿದ 885 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ಪ್ರಧಾನ

Pinterest LinkedIn Tumblr

ಹೊಸದಿಲ್ಲಿ,ಜ.25: ಗಣತಂತ್ರ ದಿನದ ಮುನ್ನಾದಿನವಾದ ಶುಕ್ರವಾರ ತಮ್ಮ ವಿಶಿಷ್ಟ ಸೇವೆಗಳಿಗಾಗಿ ಸರಕಾರದಿಂದ ಗೌರವಕ್ಕೆ ಪಾತ್ರರಾಗಿರುವ ದೇಶಾದ್ಯಂತದ 885 ಪೊಲೀಸ್ ಅಧಿಕಾರಿಗಳಲ್ಲಿ ಮರಣೋತ್ತರವಾಗಿ ರಾಷ್ಟ್ರಪತಿಗಳ ಪೊಲಿಸ್ ಶೌರ್ಯ ಪದಕಕ್ಕೆ ಭಾಜನರಾಗಿರುವ ಸಿಆರ್‌ಪಿಎಫ್‌ನ ಮೂವರು ಕಾನ್‌ಸ್ಟೇಬಲ್‌ಗಳು ಸೇರಿದ್ದಾರೆ.

ಕರ್ತವ್ಯದ ಸಂದರ್ಭಗಳಲ್ಲಿ ಬಲಿದಾನಗೈದ ಸಿಆರ್‌ಪಿಎಫ್ ಯೋಧರಾದ ಮುಹಮ್ಮದ್ ಯಾಸೀನ್,ಬೋರಸೆ ದಿನೇಶ ದೀಪಕ್ ಮತ್ತು ಜಸ್ವಂತ್ ಸಿಂಗ್ ಅವರು ಮರಣೋತ್ತರವಾಗಿ ರಾಷ್ಟ್ರಪತಿಗಳ ಪೊಲೀಸ್ ಶೌರ್ಯ ಪದಕಗಳಿಗೆ ಭಾಜನರಾದರೆ,146 ಜನರು ಪೊಲೀಸ್ ಶೌರ್ಯ ಪದಕಗಳು,74 ಜನರು ವಿಶಿಷ್ಟ ಸೇವೆಗಳಿಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಗಳು ಮತ್ತು 632 ಜನರು ಪ್ರಶಂಸನೀಯ ಸೇವೆಗಾಗಿ ಪೊಲೀಸ್ ಪದಕಗಳಿಗೆ ಪಾತ್ರರಾಗಿದ್ದಾರೆ. 86 ಜನರಿಗೆ ಅಗ್ನಿಶಾಮಕ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ. ಈ ಪೈಕಿ 15 ಸಿಬ್ಬಂದಿಗಳು ರಾಷ್ಟ್ರಪತಿಗಳ ಅಗ್ನಿಶಾಮಕ ಸೇವಾ ಪದಕಗಳಿಗೆ ಪಾತ್ರರಾಗಿದ್ದಾರೆ.

58 ಸಿಬ್ಬಂದಿಗಳಿಗೆ ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ ಪದಕಗಳನ್ನು ನೀಡಲಾಗಿದೆ. ಈ ಪೈಕಿ ಎಂಟು ಸಿಬ್ಬಂದಿಗಳಿಗೆ ರಾಷ್ಟ್ರಪತಿಗಳ ಪದಕ ಪ್ರಾಪ್ತವಾಗಿವೆ.

Comments are closed.