ರಾಷ್ಟ್ರೀಯ

ಇನ್ನು ಮುಂದೆ ಇನ್​ಕಮಿಂಗ್ ಕರೆಗಳಿಗೆ ದರ​!

Pinterest LinkedIn Tumblr


ಟೆಲಿಕಾಂ ಸೆಕ್ಟರ್​ನ ದೀರ್ಘಾವಧಿಯ ವಾಲಿಟಿಡಿಗೆ ಬ್ರೇಕ್​ ಬೀಳಲಿದೆಯೇ? ಹೌದು ಎನ್ನುತ್ತಿದೆ ಕೆಲ ಮೂಲಗಳು. ಕೆಲವು ಟೆಲಿಕಾಂ ಕಂಪೆನಿಗಳು ಇನ್​ಕಮಿಂಗ್​ ಕರೆಗಳಿಗೆ ದರ ವಿಧಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ದೀರ್ಘಾವಧಿಯ ವಾಲಿಟಿಡಿ ಮತ್ತು ಅನಿಯಮಿತ ಕರೆಗಳಿಂದ ಬಳಕೆದಾರರು ರಿಜಾರ್ಚ್​​ ಮಾಡುತ್ತಿಲ್ಲ. ಇದಕ್ಕಾಗಿ ತಿಂಗಳಿಗೆ ನಿರ್ದಿಷ್ಟ ಮೊತ್ತವನ್ನು ರಿಜಾರ್ಜ್​ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಕಂಪೆನಿಗಳು ಯೋಚಿಸಿದೆ. ಆರಂಭದಲ್ಲಿ ಪ್ರತಿ ತಿಂಗಳು ಇನ್​ಕಮಿಂಗ್ ಕರೆಗಳಿಗಾಗಿ 35 ರಿಜಾರ್ಚ್​ ದರ ವಿಧಿಸಲಿದೆ ಎನ್ನಲಾಗಿದೆ. ಅಲ್ಲದೆ ಮುಂಬರುವ ದಿನಗಳಲ್ಲಿ ಇದನ್ನು 75 ರೂ.ಗೆ ಏರಿಸಲಿದೆ ಎಂದು ಹೇಳಲಾಗಿದೆ.

ಈ ಬಗ್ಗೆ ಈಗಾಗಲೇ ಏರ್​ಟೆಲ್​ ಟೆಲಿಕಾಂ ಕಂಪೆನಿಯ ಸಿಎಂಡಿ ಸುನೀಲ್ ಭಾರ್ತಿ ಮಿತ್ತಲ್ ಸೂಚನೆ ನೀಡಿದ್ದು, ಮುಂಬರುವ ದಿನಗಳಲ್ಲಿ ತಿಂಗಳಿಗೆ ಕನಿಷ್ಠ 35 ರೂ. ರಿಜಾರ್ಚ್​ ಮಾಡಿಕೊಳ್ಳುವುದು ಕಡ್ಡಾಯವಾಗಲಿದೆ. ಈ ದರ ಏರ್​ಟೆಲ್​ನಲ್ಲಿ 75 ರೂ.ವರೆಗೆ ಏರಿಕೆಯಾಗಬಹುದು ಎಂದು ತಿಳಿಸಿದ್ದಾರೆ.

ಕಳೆದ ನವೆಂಬರ್​ನಲ್ಲಿ ಏರ್​ಟೆಲ್​ ಕಂಪೆನಿಯು 2G ಸಿಮ್​ಗಳ ಬಳಕೆದಾರರಿಗೆ ಕನಿಷ್ಠ ರಿಜಾರ್ಚ್​​ ನಿಯಮವನ್ನು ಜಾರಿಗೆ ತಂದಿತ್ತು. ಇದರ ಬೆನ್ನೆಲ್ಲೇ ವೊಡಾಫೋನ್​-ಐಡಿಯಾ ಕೂಡ ತನ್ನ ಪ್ಲಾನ್​ನಲ್ಲಿ ಬದಲಾವಣೆ ಮಾಡಿ ಕಡ್ಡಾಯ ರಿಜಾರ್ಚ್​ ಪ್ಲಾನ್​ ಅನ್ನು ಜಾರಿಗೊಳಿಸಿತ್ತು. ಇದರಿಂದ ಗ್ರಾಹಕರು ಕೈ ತಪ್ಪಲಿದೆ ಎನ್ನಲಾಗಿದ್ದರೂ, 2G ಬಳಕೆದಾರರನ್ನು 4G ಅಪ್​ಗ್ರೇಡ್​ ಮಾಡಿಕೊಳ್ಳಲು ಕಂಪೆನಿಗಳು ಇಂತಹದೊಂದು ಯೋಜನೆ ಮಾಡಿಕೊಂಡಿದೆ ಎನ್ನಲಾಗಿತ್ತು. ಆದರೆ ಈ ಬಾರಿ ಲೈಫ್​ ಟೈಂ ಸಿಮ್​ಗಳ ಇನ್​ಕಮಿಂಗ್​ ಕರೆಗಾಗಿ ರಿಜಾರ್ಚ್ ಮಾಡುವುದು ಕಡ್ಡಾಯ ಮಾಡಲಿದೆ. ಈ ಯೋಜನೆ​ ಜಾರಿಯಾದರೆ ಗ್ರಾಮೀಣ ಪ್ರದೇಶದ ಮೊಬೈಲ್​ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರೊಬ್ಬರು.

ಏರ್​ಟೆಲ್​ ಮತ್ತು ವೊಡಾಫೋನ್​-ಐಡಿಯಾ ಕಂಪೆನಿಗಳು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್)ಗೆ ಈ ಕುರಿತು ಮನವಿ ಸಲ್ಲಿಸಿದ್ದು, ಟಾರಿಫ್​ ಪ್ಲಾನ್​ ಬದಲಿಸುವ ಬಗ್ಗೆ ಸೂಚನೆ ನೀಡಿದೆ ಎನ್ನಲಾಗಿದೆ. ಆದರೆ ಟ್ರಾಯ್​ ಕಡೆಯಿಂದ ಯಾವುದೇ ಅನುಮೋದನೆ ಸಿಕ್ಕಿಲ್ಲ. ಈ ಯೋಜನೆಗೆ ಅನುಮತಿ ಸಿಕ್ಕರೆ ಗ್ರಾಹಕರು ಇನ್​ಕಮಿಂಗ್​ ಕರೆಗಳಿಗೆ ರಿಜಾರ್ಚ್​ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬರಲಿದೆ.

ಹೊಸ ಟಾರಿಫ್​ ಪ್ಲಾನ್​ಗೆ ಕಾರಣವೇನು?
ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಎಬ್ಬಿಸಿರುವ ಅಲೆಗೆ ತಡೆಯೊಡ್ಡಲು ಇತರೆ ಕಂಪೆನಿಗಳು ಯೋಜನೆ ರೂಪಿಸಿಕೊಳ್ಳುತ್ತಿದೆ. ಅಂಬಾನಿ ಒಡೆತನದ ಜಿಯೋವನ್ನು ನಿಯಂತ್ರಿಸಲು ದೇಶದ ಎಲ್ಲಾ ಟೆಲಿಕಾಂ ಕಂಪೆನಿಗಳು ಒಗ್ಗೂಡಲು ಪ್ಲಾನ್​ ಮಾಡಿಕೊಂಡಿವೆ ಎನ್ನಲಾಗಿದೆ. ಭಾರತದ ಗ್ರಾಮೀಣ ಗ್ರಾಹಕರು ಹೆಚ್ಚಾಗಿ ಜಿಯೋ ನೆಟ್​ವರ್ಕ್​ ಅನ್ನು ಬಳಸುತ್ತಿದ್ದಾರೆ. ಜಿಯೋಫೋನ್​ಗಳ ಉಚಿತ ಕರೆ ಸೌಲಭ್ಯವನ್ನು ನಿಯಂತ್ರಿಸಲು ಮತ್ತು ಇನ್​ಕಮಿಂಗ್​ ಕರೆಗಳಿಗೆ ದರ ವಿಧಿಸಿ ಜಿಯೋಗೆ ಸ್ಪರ್ಧೆಯೊಡ್ಡಲು ಟೆಲಿಕಾಂ ಕಂಪೆನಿಗಳ ಒಕ್ಕೂಟ ಮುಂದಾಗಿವೆ ಎಂದು ಹೇಳಲಾಗಿದೆ.

ಜಿಯೋಗೆ ಪ್ರಬಲ ಸ್ಫರ್ಧೆ:
ಈ ಹೊಸ ಯೋಜನೆ ಜಾರಿಯಾದರೆ ಜಿಯೋ ನೆಟ್​ವರ್ಕ್​ಗೆ ಹೊಡೆತ ಬೀಳುವುದು ಖಚಿತ ಎನ್ನಲಾಗುತ್ತಿದೆ. ಏಕೆಂದರೆ ದೇಶದ ಶೇ.80 ರಷ್ಟು ಟೆಲಿಕಾಂ ಕಂಪೆನಿಗಳು ಒಟ್ಟಾಗಿ ಒಂದೇ ನಿಯಮ ರೂಪಿಸಿದರೆ ಜಿಯೋ ಮೇಲೆ ಸುಲಭವಾಗಿ ಸವಾರಿ ಮಾಡಬಹುದು ಎನ್ನುತ್ತಾರೆ ಟೆಲಿಕಾಂ ಮಾರುಕಟ್ಟೆ ತಜ್ಞರೊಬ್ಬರು.

ಜಿಯೋಗೆ ಪ್ಲಸ್​ ಅಂಡ್​ ಮೈನಸ್:
ಒಂದು ಲೆಕ್ಕದ ಪ್ರಕಾರ ಎಲ್ಲಾ ಕಂಪೆನಿಗಳು ಸೇರಿ ರೂಪಿಸುವ ಹೊಸ ಪ್ಲಾನ್​ನಿಂದ ಜಿಯೋ ಕಂಪೆನಿಗೂ ಲಾಭವಾಗಲಿದೆ. ಇನ್​ಕಮಿಂಗ್ ಕರೆ ದರದಿಂದ ಜಿಯೋಗೆ ಪ್ಲಸ್​ ಪಾಯಿಂಟ್ ಆಗಲಿದೆ. ಆದರೆ ಜಿಯೋಫೋನ್​ನಂತಹ ಸೇವೆಗಳ ಮೇಲೆ ಈ ಪ್ಲಾನ್​ ನೇರ ಪರಿಣಾಮ ಬೀರಲಿದೆ ಎನ್ನಲಾಗಿದೆ. ಆದರೆ ಈ ಕುರಿತು ಟ್ರಾಯ್ ಇಲಾಖೆ ಯಾವುದೇ ಸ್ಪಷ್ಟನೆ ನೀಡಿಲ್ಲ.

Comments are closed.