ರಾಷ್ಟ್ರೀಯ

ನರೋಡಾ ಪಾಟಿಯಾ ಪ್ರಕರಣದ ನಾಲ್ವರು ದೋಷಿಗಳಿಗೆ ಸುಪ್ರೀಂ ಜಾಮೀನು

Pinterest LinkedIn Tumblr


ನವದೆಹಲಿ: 2002ರಲ್ಲಿ ನಡೆದಿದ್ದ ನರೋಡಾ ಪಾಟಿಯಾ ಹತ್ಯಾಕಾಂಡ ಪ್ರಕರಣದ ನಾಲ್ವರು ದೋಷಿಗಳಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಉಮೇಶ್‌ಭಾಯಿ ಸುರಾಭಾಯಿ ಭರವಾಡ, ರಾಜ್‌ಕುಮಾರ್‌, ಪ್ರಕಾಶ್ ಭಾಯ್ ರಾತೋಡ್ ಮತ್ತು ಹರ್ಷದ್‌ ಎಂಬ ನಾಲ್ವರು ದೋಷಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಅಹಮದಾಬಾದ್ನ ನರೋಡಾ ಪಟಿಯಾ ಪ್ರದೇಶದಲ್ಲಿ 2002 ರಲ್ಲಿ ಗೋಧ್ರಾ ನಂತರದ ಗಲಭೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ 97 ಜನರನ್ನು ಹತ್ಯೆ ಮಾಡಲಾಗಿತ್ತು. ಕಳೆದ ವರ್ಷ ಏಪ್ರಿಲ್‌ 20ರಂದು ಗುಜರಾತ್‌ ಹೈಕೋರ್ಟ್‌ 29 ಆರೋಪಿಗಳಲ್ಲಿ 12 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಇವರಲ್ಲಿ ಮಾಜಿ ಶಾಸಕ ಮಾಯಾ ಕೊಡ್ನಾನಿ ಮತ್ತು ಬಜರಂಗ್ ದಳದ ನಾಯಕ ಬಾಬು ಬಜರಂಗಿ ಸೇರಿದಂತೆ ಎಲ್ಲ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

Comments are closed.