ರಾಷ್ಟ್ರೀಯ

ತಾನು ಕೂಡ ಪ್ರಧಾನಿ ಹುದ್ದೆಯ ಪ್ರಬಲ ಅಭ್ಯರ್ಥಿ ಎಂದ ಬಿಜೆಪಿಯ ರೆಬೆಲ್ ಮುಖಂಡ ಯಶ್ವಂತ್ ಸಿನ್ಹಾ

Pinterest LinkedIn Tumblr

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿ ಹುನುಮನ ಬಾಲದಂತೆ ಬೆಳೆಯುತ್ತಾ ಹೋಗುತ್ತಿದ್ದು. ಇದಕ್ಕೆ ಇದೀಗ ಹೊಸದಾಗಿ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿಯ ರೆಬೆಲ್ ಮುಖಂಡ ಯಶ್ವಂತ್ ಸಿನ್ಹಾ ಕೂಡ ಎಂಟ್ರಿ ಕೊಟ್ಟಿದ್ದಾರೆ.

ಹೌದು.. ಈ ಬಗ್ಗೆ ಸ್ವತಃ ಯಶ್ವಂತ್ ಸಿನ್ಹಾ ಅವರು ಹೇಳಿಕೊಂಡಿದ್ದು, ತಾವೂ ಕೂಡ ಪ್ರಧಾನಿ ಹುದ್ದೆಯ ಪ್ರಬಲ ಅಭ್ಯರ್ಥಿ ಎಂದು ಹೇಳಿಕೊಂಡಿದ್ದಾರೆ. ಉದ್ಯೋಗ ಸೃಷ್ಟಿ, ಕಟ್ಟಡ-ರಸ್ತೆಗಳು, ಪಟ್ಟಣಗಳು ಮತ್ತು ಕೈಗಾರಿಕೆಗಳ ಅಭಿವೃದ್ದಿ ವಿಚಾರದಲ್ಲಿ ತಮಗೆ ಸಾಕಷ್ಟು ಜ್ಞಾನವಿದೆ ಎಂದು ಹೇಳಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ‘ಭಾರತಲ್ಲಿ ಉದ್ಯೋಗ ಸೃಷ್ಟಿ, ರಸ್ತೆ ಕೊರತೆ ಗಂಭೀರ ಸಮಸ್ಯೆಗಳಾಗಿವೆ. ಕೃಷಿಯನ್ನು ಲಾಭದಾಯಕ ಕ್ಷೇತ್ರವಾಗಿ ಬದಲಿಸುವ, ನೀರಾವರಿ ಯೋಜನೆಗಳನ್ನು ಯಶಸ್ವಿಯಾಗಿಸುವ, ಪಟ್ಟಣ ನಿರ್ಮಾಣ, ಕೈಗಾರಿಕಾ ಅಭಿವೃದ್ಧಿ ಕುರಿತು ದೂರದೃಷ್ಟಿ ಹೊಂದಿರುವ ಪ್ರಬಲ ನಾಯಕರ ಅಗತ್ಯವಿದೆ. ಈ ದೇಶದಲ್ಲಿ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಈ ಕೆಲಸಗಳನ್ನು ಮಾಡಬಲ್ಲ ನಾಯಕರು ಯಾರಾದರೂ ಇದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಯಾರೂ ಇಲ್ಲ ಎಂದು ಹೇಳುವ ಮೂಲಕ ತಾವು ಈ ಬಗ್ಗೆ ಕೆಲಸ ಮಾಡಲು ಸಿದ್ಧ ಎಂದು ಪರೋಕ್ಷವಾಗಿ ಹೇಳಿದ್ದಾರೆ. ನನ್ನ ಪ್ರಕಾರ ಅಂತಹ ವಿಚಾರ ಧಾರೆಗಳು ನನ್ನಲ್ಲಿದ್ದು, ಅವಕಾಶ ಸಿಕ್ಕರೆ ನಾನು ಕೆಲಸ ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ವತಿಯಿಂದ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ನಿತಿನ್ ಗಡ್ಕರಿ ಅವರ ಹೆಸರು ಕೇಳಿಬರುತ್ತಿದ್ದು, ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಇರುವವರೆಗೂ ಸಾಧ್ಯವಿಲ್ಲ. ಅವರಿಬ್ಬರೂ ನಿವೃತ್ತಿಯಾಗದ ಹೊರತು ನಿತಿನ್ ಗಡ್ಕರಿ ಪ್ರಧಾನಿ ಹುದ್ದೆಯ ಕನಸು ನನಸಾಗುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200ಕ್ಕಿಂತ ಕಡಿಮೆ ಸ್ಥಾನಗಳಿಸಿದರೂ ಶಾ ಮತ್ತು ಮೋದಿ ನಿವೃತ್ತಿಯಾಗುವುದಿಲ್ಲ. ನಾನೇಕೆ ಈ ಮಾತು ಹೇಳುತ್ತಿದ್ದೇನೆ ಎಂದರೆ ಶಾ ಮತ್ತು ಮೋದಿ ಜೋಡಿ ಬಿಜೆಪಿ ಪಕ್ಷದ ಮೇಲೆ ತಮ್ಮ ಕಪಿ ಹಿಡಿತವನ್ನು ಸಾಧಿಸಿದ್ದಾರೆ. ಈ ಇಬ್ಬರು ನಾಯಕ ಕಪಿಮುಷ್ಟಿಯಲ್ಲಿ ಬಿಜೆಪಿ ಸಿಲುಕಿದೆ. ಹೀಗಾಗಿ ಗಡ್ಕರಿ ಕನಸೂ ನನಸಾಗುವುದಿಲ್ಲ ಎಂದು ಸಿನ್ಹಾ ವ್ಯಂಗ್ಯ ಮಾಡಿದ್ದಾರೆ.

Comments are closed.