ರಾಷ್ಟ್ರೀಯ

ಪತಿ ನಾಗ್ಪುರ, ಪತ್ನಿ ಅಮೆರಿಕ: ವಾಟ್ಸ್‌ ಆ್ಯಪ್‌ ವಿಡಿಯೊ ಕಾಲ್‌ ಮೂಲಕ ವಿಚ್ಛೇದನ!

Pinterest LinkedIn Tumblr


ನಾಗ್ಪುರ: ಕೌಟುಂಬಿಕ ನ್ಯಾಯಾಲಯವು ವಾಟ್ಸ್‌ ಆ್ಯಪ್‌ ವಿಡಿಯೊ ಕಾಲ್‌ ಮೂಲಕ ಪತ್ನಿಯ ಒಪ್ಪಿಗೆ ಪಡೆದು, ದಂಪತಿಗೆ ವಿವಾಹ ವಿಚ್ಛೇದನಕ್ಕೆ ಹಸಿರು ನಿಶಾನೆ ತೋರಿದ ಅಪರೂಪದ ಪ್ರಕರಣ ನಾಗ್ಪುರದಲ್ಲಿ ವರದಿಯಾಗಿದೆ.

35 ವರ್ಷ ಮಹಿಳೆ ಅಮೆರಿಕದ ಮಿಷಿಗನ್‌ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿ ವೀಸಾದಡಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆ ವ್ಯಾಸಂಗ ಮಾಡುತ್ತಿರುವ ಶೈಕ್ಷ ಣಿಕ ಸಂಸ್ಥೆಯಿಂದ ದೀರ್ಘಾವಧಿ ರಜಾ ದೊರೆಯುವುದಿಲ್ಲ ಎಂಬ ಕಾರಣಕ್ಕೆ ವಾಟ್ಸ್‌ ಆ್ಯಪ್‌ ವಿಡಿಯೊ ಮೂಲಕ ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದ್ದರು. ಆ ಮಹಿಳೆಯ ಪತಿ (37ವರ್ಷ) ನಾಗ್ಪುರ ಮೂಲದವರು. ಅವರೂ ಮಿಷಿಗನ್‌ನಲ್ಲಿ ಉದ್ಯೋಗ ನಿರ್ವಹಿಸುತ್ತಾರೆ. ಆದರೆ ಪರಸ್ಪರರ ಒಪ್ಪಿಗೆ ಮೇಲೆ ವಿಚ್ಛೇದನಕ್ಕೆ ಕೋರ್ಟ್‌ ಒಪ್ಪಿದಾಗ ಪತಿ ನಾಗ್ಪುರದಲ್ಲೇ ಇದ್ದರು!

ಎರಡೂ ಕಡೆಯ ಒಪ್ಪಿಗೆ ಕೇಳಿದ ನ್ಯಾ.ಸ್ವಾತಿ ಚೌಹಾಣ್‌ ಅವರು, ಪತಿಯು ಮಹಿಳೆಗೆ ಹತ್ತು ಲಕ್ಷ ರೂ. ನೀಡಬೇಕು ಎಂಬ ಷರತ್ತು ಹಾಕಿದ್ದಾರೆ. ಜನವರಿ 14ರಂದು ವಿಚ್ಛೇದನ ಪ್ರಕರಣ ಇತ್ಯರ್ಥವಾಗಿದೆ. ಐದು ವರ್ಷದ ಹಿಂದೆ ಈ ಎಂಜಿನಿಯರ್‌ ದಂಪತಿ ಸಿಕಂದರಾಬಾದ್‌ನಲ್ಲಿ ಮದುವೆ ಆಗಿದ್ದರು. ಅಮೆರಿಕ ಮೂಲದ ಆಟೋಮೊಬೈಲ್‌ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದರು.

ಅಮೆರಿಕದ ವೀಸಾ ಅವಧಿ ಮುಗಿದ ಮೇಲೆ ಅಲ್ಲಿಂದ ವಾಪಸಾದ ಮೇಲೆ ನಾಗ್ಪುರದಲ್ಲಿನ ತನ್ನ ಅತ್ತೆ-ಮಾವನ ಜತೆಗೆ ಇದ್ದರು. ಆ ಸಂದರ್ಭದಲ್ಲಿ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅದಾದ ನಂತರ ವಿದ್ಯಾರ್ಥಿ ವೀಸಾದ ಮೇಲೆ ಮತ್ತೆ ಅಮೆರಿಕಗೆ ಆಕೆ ಹೋಗಿದ್ದರು. ಕ್ರಮೇಣ ಇಬ್ಬರ ಮಧ್ಯದ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಮಹಿಳೆಯ ಪತಿ ನಾಗ್ಪುರ ಕೋರ್ಟ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು.

Comments are closed.