ರಾಷ್ಟ್ರೀಯ

ವಾಟ್ಸ್​ಆ್ಯಪ್​ನಲ್ಲಿ ಗ್ರೂಪ್ ವೀಡಿಯೋ​ ಕಾಲಿಂಗ್ ಈಗ ಮತ್ತಷ್ಟು ಸುಲಭ ವಾಟ್ಸ್​ಆ್ಯಪ್

Pinterest LinkedIn Tumblr


ವಾಟ್ಸ್​ಆ್ಯಪ್​ ತನ್ನ ಬಳಕೆದಾರರಿಗೆ ಅತ್ಯುತ್ತಮ ಫೀಚರ್ಸ್​ಗಳನ್ನು ಪರಿಚಯಿಸುತ್ತಲೇ ಬರುತ್ತಿದೆ. ಇದೀಗ ಅಂತಹದ್ದೆ ಹೊಸ ಫೀಚರ್​ನ್ನು ವಾಟ್ಸ್​ಆ್ಯಪ್​ ನೀಡಿದೆ. ಈ ಹೊಸ ಆಯ್ಕೆಯ ಮೂಲಕ ನೀವು ವಾಟ್ಸ್​ಆ್ಯಪ್​ನಲ್ಲಿ ವೀಡಿಯೊ​ ಗ್ರೂಪ್ ಕರೆ ಮಾಡಬಹುದಾಗಿದೆ. ಈ ಹಿಂದೆ ಇಂತಹದೊಂದು ಆಯ್ಕೆಯನ್ನು ಐಒಎಸ್ ಮೊಬೈಲ್​ ಬಳಕೆದಾರರಿಗೆ ಒದಗಿಸಿತ್ತು. ಇದೀಗ ಈ ಹೊಸ ಫೀಚರ್​ ಅನ್ನು ಆಂಡ್ರಾಯ್ಡ್​ ಬಳಕೆದಾರರಿಗೂ ಕೂಡ ನೀಡಲಾಗಿದೆ.

ಆಂಡ್ರಾಯ್ಡ್​ನಲ್ಲಿ ಅಪ್​ಡೇಟ್​
WeBetaInfo ನೀಡಿದ ಮಾಹಿತಿ ಪ್ರಕಾರ WhatsAppನ ಹೊಸ ಫೀಚರ್​ನ್ನು ಈಗಾಗಲೇ ಐಒಎಸ್​ನಲ್ಲಿ ಪರಿಚಯಿಸಲಾಗಿದೆ. ಅಲ್ಲದೆ ಇದೀಗ ಮತ್ತಷ್ಟು ವೈಶಿಷ್ಠ್ಯಗಳೊಂದಿಗೆ ಗ್ರೂಪ್ ಕರೆ ಮಾಡುವ ಆಯ್ಕೆಯನ್ನು ಆಂಡ್ರಾಯ್ಡ್ ಬಳಕೆದಾರಿಗೆ ನೀಡಲಾಗುತ್ತಿದೆ. ಈ ಫೀಚರ್​ ಮೂಲಕ ನೀವು ಐಒಎಸ್​ ಮತ್ತು ಅಂಡ್ರಾಯ್ಡ್​ ಬಳಕೆದಾರರಿಗೂ ಕರೆ ಮಾಡಬಹುದು. ಈ ಗ್ರೂಪ್ ಕಾಲಿಂಗ್ ಮಾಡಲು ಮೊದಲು ಕರೆಯನ್ನು ಮಾಡಿ, ಬಳಿಕ ಅದಕ್ಕೆ ನಿಮಗೆ ಬೇಕಾದ ಸದಸ್ಯರನ್ನು ಸೇರಿಸಿಕೊಳ್ಳಬೇಕಾಗುತ್ತದೆ.

ಗ್ರೂಪ್ ಕಾಲ್ ಹೇಗೆ?
ವಾಟ್ಸ್​ಆ್ಯಪ್​ 2.19.9 ವರ್ಷನ್​ನಲ್ಲಿ ಈ ಗ್ರೂಪ್ ಕಾಲಿಂಗ್ ಆಯ್ಕೆಯನ್ನು ಸೇರಿಸಲಾಗಿದೆ. ವಾಟ್ಸ್​ಆ್ಯಪ್​ ವೀಡಿಯೊ ಕಾಲ್ ಬಟನ್​ ಕ್ಲಿಕ್ ಮಾಡಿದ ಬಳಿಕ ಮೇಲ್ಭಾಗದಲ್ಲಿ ಪ್ಲಸ್​ (+) ಎಂಬ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮಗೆ ಬೇಕಾದ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬಹುದು.

ಕೇವಲ ಮೂರು ಸದಸ್ಯರು
ಗ್ರೂಪ್ ಕಾಲಿಂಗ್ ಆಯ್ಕೆಯಲ್ಲಿ ನೀವು ಕೇವಲ ಮೂರು ಸದಸ್ಯರನ್ನು ಮಾತ್ರ ಆರಿಸಿಕೊಳ್ಳಬಹುದು. ಅಂದರೆ ಒಟ್ಟು ನಾಲ್ಕು ಮಂದಿ ಸದಸ್ಯರು ಗ್ರೂಪ್ ಕರೆ ಮಾಡುವ ಅವಕಾಶ ನೀಡಲಾಗಿದೆ. ಈ ಆಯ್ಕೆಯು ನಿಮ್ಮ ವಾಟ್ಸ್​ಆ್ಯಪ್​ನಲ್ಲಿ ಇಲ್ಲದಿದ್ದರೆ, ಅಪ್​ಡೇಟ್​ ಮಾಡಿಕೊಳ್ಳುವ ಮೂಲಕ ಗ್ರೂಪ್ ವೀಡಿಯೊ ಕಾಲ್ ಮಾಡಬಹುದು.

Comments are closed.