ರಾಷ್ಟ್ರೀಯ

ನಮ್ಮ ದೇಶದ 50 ಸೈನಿಕರನ್ನು ‘ಹನಿಟ್ರ್ಯಾಪ್’ ಬಲೆಗೆ ಕೆಡವಿದ ಪಾಕ್ ಮಹಿಳೆ!

Pinterest LinkedIn Tumblr


ನವದೆಹಲಿ: ಹಸಿರು ಸೀರೆ ಉಟ್ಟು, ಕಿರುನಗೆ ಬೀರುವ ಫೋಟೋವನ್ನು ಫೇಸ್​ಬುಕ್​ಗೆ ಅಪ್​ಲೋಡ್​ ಮಾಡಿದ್ದ ಅನಿಕಾ ಛೋಪ್ರಾ ಎಂಬ ಹೆಸರಿನ ಸುಂದರ ಯುವತಿ ತಾನು ಭಾರತೀಯ ಸೇನೆಯಲ್ಲಿ ನರ್ಸ್​ ಎಂಬ ಅಡಿಬರೆಹ ಬರೆದುಕೊಂಡಿದ್ದಳು.

ಈ ಕಿರುನಗೆಯ ಫೋಟೋಗೆ ಭಾರತದ 50 ಸೈನಿಕರು ಮನಸೋತು, ಹನಿಟ್ರ್ಯಾಪ್​ ಬಲೆಗೆ ಸಿಲುಕಿರುವ ವಿಷಯ ಇಂಟಲಿಜೆನ್ಸ್​ ಏಜೆನ್ಸಿಯಿಂದ ತಿಳಿದುಬಂದಿದೆ. ಈ ಸಂಬಂಧ ಒಬ್ಬ ಸೈನಿಕನನ್ನು ಬಂಧಿಸಲಾಗಿದೆ. 50 ಮಂದಿ ಹನಿಟ್ರ್ಯಾಪ್​ಗೆ ಒಳಗಾಗಿರುವುದು ಭಾರತೀಯ ಸೇನೆಗೆ ಈಗ ದೊಡ್ಡ ತಲೆನೋವಾಗಿದೆ.
ಸೇನೆಯ ಮಹತ್ವದ ಸೂಕ್ಷ್ಮ ವಿಷಯಗಳನ್ನು ಮತ್ತು ಸೇನಾ ಚಟುವಟಿಕೆ ಸ್ಥಳಗಳ ಚಿತ್ರಗಳನ್ನು ಅನಿಕಾ ಛೋಪ್ರಾ ಜೊತೆಗೆ ಹಂಚಿಕೊಂಡ ಆರೋಪದ ಮೇಲೆ ಸೋಮವೀರ್ ಸಿಂಗ್​ ಎಂಬ ಯೋಧನನ್ನು ಬಂಧಿಸಲಾಗಿದೆ.

ಎರಡು ಸೇನೆಯ ಇಂಟಲಿಜೆನ್ಸಿ ಮತ್ತು ರಾಜಸ್ಥಾನದ ಎಟಿಎಸ್​ ಪ್ರಕಾರ, ಛೋಪ್ರಾ ಪಾಕಿಸ್ತಾನದ ಏಜೆಂಟ್​. ಆಕೆ ಕೇವಲ ಒಬ್ಬ ಸೈನಿಕನನ್ನು ಮಾತ್ರ ಹನಿಟ್ರ್ಯಾಪ್​ಗೆ ಕೆಡವಿಲ್ಲ. ಬದಲಾಗಿ ಹಲವು ಸೈನಿಕರೊಂದಿಗೆ ಸಂಬಂಧ ಸಾಧಿಸಿದ್ದಾಳೆ. ಆದರೆ, ಆಕೆ ಬ್ಲಾಕ್​ಮೇಲ್​ ಮಾಡುವವರೆಗೂ ಛೋಪ್ರಾ ಪೂರ್ವಾಪರ ನನಗೆ ಗೊತ್ತಿರಲಿಲ್ಲ ಎಂದು ಬಂಧಿತ ಸೈನಿಕ ಸಿಂಗ್​ ಹೇಳುತ್ತಿದ್ದಾನೆ.

ಸೋಮವೀರ್ ಸಿಂಗ್ ಮತ್ತು ಅನಿಕಾ ಛೋಪ್ರಾ ನಡುವೆ 2016ರಂದು ಫೇಸ್​ಬುಕ್​ನಲ್ಲಿ ಪರಿಚಯವಾಗಿದೆ. ಇದಾದ ಬಳಿಕೆ ಇಬ್ಬರ ನಡುವೆ ಅತಿಯಾದ ಸಲುಗೆ ಬೆಳೆದಿತ್ತು. ಅನಿಕಾ ಬಗ್ಗೆ ಅತಿಯಾದ ಒಲವು ಬೆಳೆಸಿಕೊಂಡ ಸಿಂಗ್ ಕೊನೆಗೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿ, ಅನಿಕಾಳನ್ನು ಮದುವೆಯಾಗಲು ಮನಸ್ಸು ಮಾಡಿದ್ದ.

Comments are closed.