ರಾಷ್ಟ್ರೀಯ

ಬಿಹಾರ ಆಶ್ರಯ ತಾಣದ ಪ್ರಕರಣ; ಅತಿಥಿಗಳಿಂದ ಅತ್ಯಾಚಾರ; ಬಾಲಕಿಯರು ಬಿಚ್ಚಿಟ್ಟ ಸತ್ಯಗಳು

Pinterest LinkedIn Tumblr


ಪಟ್ನಾ: ಮುಜಾಫರ್​ಪುರ​ ಆಶ್ರಯ ತಾಣದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ 73 ಪುಟಗಳ ಜಾರ್ಜ್​ ಶೀಟ್​ ಸಲ್ಲಿಸಿದೆ. ಆಶ್ರಯತಾಣದಲ್ಲಿ ಯಾವ ರೀತಿ ಅಮಾನವೀಯವಾಗಿ ನಡೆಸಿಕೊಳ್ಳಲಾಗಿತ್ತು ಎಂಬ ಕುರಿತು ಬಾಲಕಿಯರು ಸಿಬಿಐ ಮುಂದೆ ಅಳಲು ತೊಡಿಕೊಂಡಿದ್ದಾರೆ.

ರಾಜಕೀಯ ನಾಯಕರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಆಶ್ರಯತಾಣದ ಮುಖ್ಯಸ್ಥ ಬ್ರಿಜೇಶ್​ ಠಾಕೂರ್​ ಅತಿಥಿಗಳ ಬಳಿ ಬಾಲಕಿಯರನ್ನು ಕಳುಹಿಸುತ್ತಿದ್ದ. ಅವರುಗಳು ಅಸಭ್ಯ ಹಾಡುಗಳನ್ನು ಹಾಕಿ ಬಾಲಕಿಯರಿಗೆ ಕುಣಿಯಲು ತಿಳಿಸುತ್ತಿದ್ದರು. ಇದರಿಂದ ಉದ್ರೇಕಗೊಂಡ ಬಳಿಕ ಅವರ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂದು ತಮಗಾದ ನರಕದ ಅನುಭವವನ್ನು ಬಾಲಕಿಯರು ತಿಳಿಸಿದ್ದಾರೆ.

ಬಾಲಕಿಯರ ಹೇಳಿಕೆ ಮೇಲೆ ಅಲ್ಲಿನ ಸಿಬ್ಬಂದಿ ಸೇರಿ 20 ಆರೋಪಿಗಳ ಮೇಲೆ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

ಬ್ರಿಜೇಶ್​ ಕುಮಾರ್​ ಅತಿಥಿಗಳ ಮುಂದೆ ಬಾಲಕಿಯರಿಗೆ ಮೈ ಕಾಣುವಂತೆ ಅರೆಬರೆ ಉಡುಗೆಯನ್ನು ಹಾಕಿಕೊಳ್ಳುವಂತೆ ಹಿಂಸಿಸುತ್ತಿದ್ದರು. ಒಂದು ವೇಳೆ ಈ ಬಟ್ಟೆ ತೊಡಲು ನಿರಾಕರಿಸಿದರೆ ಅವರನ್ನು ಹೊರೆಡು ಹಿಂಸಿಸಲಾಗುತ್ತಿತ್ತು. ಬಳಿಕ ಅವರು ಭೋಜ್ಫುರಿ ಹಾಡೊಂದನ್ನು ಹಾಕುತ್ತಿದ್ದರು. ಆಗ ಅವರು, ನಮ್ಮ ಮೇಲೆ ಅತ್ಯಾಚಾರ ಎಸಗುತ್ತಿದ್ದರು ಎಂದು ಸಿಬಿಐ ಮುಂದೆ ತಿಳಿಸಿದ್ದಾರೆ.

ಹತ್ತು ವರ್ಷಗಳಿಂದ ಈ ಆಶ್ರಯತಾಣದ ಬಾಲಕಿಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣ ಟಾಟಾ ಸಮಾಜ ವಿಜ್ಞಾನ ಸಂಸ್ಥೆ ವರದಿ ನಡೆಸಿದ ಬಳಿಕ ಬೆಳಕಿಗೆ ಬಂದಿತು.

ಇದಾದ ಬಳಿಕ ಅಲ್ಲಿನ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಅಲ್ಲಿನ 42 ಮಹಿಳೆಯರಲ್ಲಿ 34 ಜನರ ಮೇಲೆ ಅತ್ಯಾಚಾರ ನಡೆಸಿರುವ ದೃಢಪಟ್ಟಿತು. ಬಳಿಕ ರಾಜಕೀಯ ಪ್ರಭಾವ ಹೊಂದಿರುವ ಬ್ರಿಜೇಶ್​ ಠಾಕೂರ್​ನನ್ನು ಬಂಧಿಸಲಾಗಿತ್ತು.

Comments are closed.